Advertisement

ದೇಹ ದಹನ ಮಾಡುವ ಮುನ್ನ ಅಂಗಾಂಗ ದಾನ ಮಾಡಿ 

11:42 AM Sep 20, 2017 | Team Udayavani |

ಕೆ.ಆರ್‌.ಪುರ: ದೇಹದ ಅಂಗಾಂಗಳನ್ನು ದಾನ ಮಾಡುವ ಸೇವಾಮನೋಭಾವವನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಹಾಗೂ ಯುವ ರೆಡ್‌ ಕ್ರಾಸ್‌ ಘಟಕದ ಸಂಯೋಜನಾಧಿಕಾರಿ ಡಾ.ಆರ್‌.ಶ್ರೀನಿವಾಸ್‌ ಹೇಳಿದರು. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ರೆಡ್‌ ಕ್ರಾಸ್‌ ಘಟಕದ ಉದ್ಘಾಟನೆ ಹಾಗೂ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕಿದೆ. ವ್ಯಕ್ತಿ ಮೃತಪಟ್ಟ ನಂತರ ದೇಹ ದಹನ ಮಾಡಿ ವ್ಯರ್ಥ ಮಾಡುವ ಬದಲು ಅಂಗಾಂಗಳನ್ನು ದಾನ ಮಾಡಿ ಜೀವಗಳನ್ನು ಉಳಿಸಬೇಕಿದೆ. ಆರೋಗ್ಯ ಹದಗೆಟ್ಟ ನಂತರ ಎಚ್ಚರಿಕೆ ವಹಿಸುವ ಬದಲು ಸಣ್ಣ ವಯಸ್ಸಿನಲ್ಲೇ ಆರೋಗ್ಯದ ಸುಧಾರಣೆ ಬಗ್ಗೆ ಚಿಂತಿಸಿ ನಿಯಮಿತ ಆಹಾರ, ವ್ಯಾಯಾಮ ರೂಢಿಸಿಕೊಳ್ಳಬೇಕು,’ ಎಂದು ತಿಳಿಸಿದರು.

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಅಶ್ವಥ್‌ ಕುಮಾರ್‌ ಶೆಟ್ಟಿ ಮಾತನಾಡಿ, “ಅಪಘಾತಕ್ಕೆ ತುತ್ತಾಗಿ ಅಸಹಾಯಕತೆಯಿಂದ ನರಳುತ್ತಿರುವವರಿಗೆ ಸಹಾಯ ಹಸ್ತ ಚಾಚುವ ಬದಲು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರಲ್ಲಿ ನಿರತರಾಗುವವರೇ ಹೆಚ್ಚಿರುವುದು ವಿಷಾಧನೀಯ. ಸಂಕಷ್ಟದಲ್ಲಿರುವವರನ್ನು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸಬಹುದು,’ ಎಂದು ತಿಳಿಸಿದರು. 

ಕರ್ನಾಟಕ ಸರ್ವೋದಯ ಮಂಡಲ ಹಾಗೂ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಹೆಚ್‌.ಎಸ್‌.ಸುರೇಶ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ರಾಮಣ್ಣ, ಯುವ ರೆಡ್‌ ಕ್ರಾಸ್‌ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಕೆ.ನಾರಾಯಣ್‌ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next