Advertisement

ಕೇಂದ್ರದ ವಿರುದ್ಧ ಸಂಘಟನೆಗಳ ಆಕ್ರೋಶ

11:51 AM Dec 24, 2019 | Team Udayavani |

ಬಸವಕಲ್ಯಾಣ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ಒಕ್ಕೂಟಗಳಿಂದ ಭಾನುವಾರ ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮತ್ತು ಮುಸ್ಲಿಮರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಕೂಗುತ್ತ ಆಕ್ರೋಷ ವ್ಯಕ್ತಪಡಿಸಿದರು. ಶಾಸಕ ಬಿ.ನಾರಾಯಣರಾವ್‌ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಅಜರ್‌ ಅಲಿ ನೌವರಂಗ ಮಾತನಾಡಿ, ಭಾರತದಲ್ಲಿ ಹಿಂದೂ-ಮುಸ್ಲಿಂ, ಕ್ರೈಸ್ತ ಸೇರಿದಂತೆ ಪ್ರತಿಯೊಬ್ಬರು ಜಾತಿ ಮತ ಪಂಥ ಮರೆತು ಸಹೋದರರಂತೆ ಬಾಳುತ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮಾಡುವ ಮೂಲಕ ದೇಶದಲ್ಲಿ ಬೇಧಭಾವ ವಾತವರಣ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ. ಕಾಯ್ದೆ ರದ್ದು ಮಾಡುವವರೆಗೂ ನಮ್ಮ ಆಂದೋಲನ ನಿಲ್ಲುವುದಿಲ್ಲ ಎಂದರು. ಖಾಜಾ ಜೀಯಾವುಲ್‌ ಹಸನ್‌ ಜಾಗೀರದಾರ್‌, ನೀಲಕಂಠ ರಾಠೊಡ, ಅರ್ಜುನ ಕನಕ, ರವಿ ಭೂರಾಳೆ, ಮೌಲಾನಾ ಅಬ್ದುಲ್‌ ಸಲಾಮ ಖಾಸಿಂ, ಪೀಠ ಪಾಶಾ ಖದೀರ್‌, ಕರೀಮ ಖಾದೀವಾಲೆ, ಮೌಲಾನಾ ಹಾಜಿ ಸಾಹೇಬ್‌,  ಅಸ್ಲಾಂ, ಜನಾಬ್‌, ಮುಜಾಹೀದ್‌ ಪಾಶಾ ಖುರೇಷಿ, ಸೈಯದ್‌ ಅಖ್ತರ್‌ ನಿಜಾಂ, ಹುಜೂರ ಪಾಶಾ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next