ಬಹರೈನ್ ; ದ್ವೀಪದ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ “ಬಂಟ್ಸ್ ಬಹರೈನ್ ” ಸಂಘಟನೆ ಇದೀಗ ಯಶಸ್ವಿಯಾಗಿ ಎರಡು ದಶಕಗಳನ್ನು ಪೂರ್ಣಗೊಳಿಸಿದ್ದು ಇದೀಗ ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಪ್ರಾಂಭವಾಗಿದೆ .
ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ದ್ವೀಪದ ಬಂಟ ಬಾಂಧವರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಸಂಘಟನೆಯ ಪ್ರಸಕ್ತ ಅಧ್ಯಕ್ಷರಾಗಿ ಸೌಕೂರು ಅರುಣ್ ಶೆಟ್ಟಿ ಯವರು ಕಾರ್ಯನಿರ್ವಹಿಸುತ್ತಿದ್ದು ಇವರ ಸಾರಥ್ಯದಲ್ಲಿ ಇದೆ ನವೆಂಬರ್ ತಿಂಗಳ 10ನೇ ತಾರೀಖಿನ ಶುಕ್ರವಾರದಂದು ಬೆಳಗ್ಗೆ 10:30ಕ್ಕೆ ಇಲ್ಲಿನ ಪಂಚತಾರಾ ಹೋಟೆಲ್ ” ಕ್ರೌನ್ ಪ್ಲಾಜಾ” ದ ಸಭಾಂಗಣದಲ್ಲಿ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಅದ್ದೊರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ .
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಂಟ ಸಮುದಾಯದ ಸಾಧಕರಾದ ಸಮಾಜ ಸೇವಕರೂ ,ಕಾಪು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಶ್ರೀ ಗುರ್ಮೆ ಸುರೇಶ್ ಶೆಟ್ಟಿ , ನಾಡಿನ ಖ್ಯಾತ ಮೂಳೆ ತಜ್ಞ ಹಾಗು ಮುಂಬೈ ಯ ದೀಪಕ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕರಾಗಿರುವ ಡಾಕ್ಟರ್ ಭಾಸ್ಕರ್ ಶೆಟ್ಟಿ ಯವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ . ಕನ್ನಡ ಚಲನಚಿತ್ರರಂಗದ ಖ್ಯಾತ ನಟ “ಸಲಗ ” ಖ್ಯಾತಿಯ ಯಶ್ ಶೆಟ್ಟಿ ಯವರು ಗೌರಾವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲಿದ್ದಾರೆ .
ವಾರ್ಷಿಕೋತ್ಸವದ ಅಂಗವಾಗಿ ವೈವಿಧ್ಯಮ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ದ್ವೀಪದ ಬಂಟ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ವರ್ಣರಂಜಿತ ಸಾಂಸ್ಕ್ರತಿಕ ಲೋಕ ಅನಾವರಣಗೊಳ್ಳಲಿದೆ .
ಈ ಕಾರ್ಯಕ್ರಮಕ್ಕೆ ಬಹರೈನ್ ನ ಬಂಟ ಸಮುದಾಯಕ್ಕೆ ಹಾಗು ಆಹ್ವಾನಿತ ಅತಿಥಿಗಳಿಗೆ ಮಾತ್ರ ಪ್ರವೇಶವಿರುವುದು . ಬಂಟಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಚೆಂದಗಾಣಿಸಕೊಡಬೇಕೆಂದು “ಬಂಟ್ಸ್ ಬಹರೈನ್ ” ನ ಅಧ್ಯಕ್ಷರಾದ ಶ್ರೀ ಅರುಣ್ ಶೆಟ್ಟಿ ಯವರು ಕರೆನೀಡಿದ್ದು ಹೆಚ್ಚಿನ ವಿವರಗಳಿಗೆ ಅವರನ್ನು ದೂರವಾಣಿ ಸಂಖ್ಯೆ 00973 39401997 ಮುಖೇನ ಸಂಪರ್ಕಿಸಬಹುದು .