Advertisement

ಸಹಾರ್ದ ಸಂಸ್ಥೆಗೆ ಸಿಗಲಿದೆ ಕೋಟಿ ರೂ. ಸಹಾಯಧನ

12:27 PM Sep 02, 2017 | |

ಬೀದರ: ಬೀದರಿನ ಸಹಾರ್ದ ತರಬೇತಿ ಸಂಸ್ಥೆಗೆ ದೇಶದಲ್ಲೇ ಡಿಸಿಸಿ ಬ್ಯಾಂಕ್‌ ಹೊಂದಿರುವ ಏಕೈಕ ತರಬೇತಿ ಸಂಸ್ಥೆ ಎಂದು ಹೆಸರು ಗಳಿಸಿದೆ. ಇದಕ್ಕೆ ಇನ್ನೂ ಹೆಚ್ಚಿನ ತರಬೇತಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕಾಗಿ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಒಂದು ಕೋಟಿ ರೂ. ಸಹಾಯ ನೀಡುವ ಭರವಸೆ ನೀಡಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

Advertisement

ನಗರದ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಸಿಂಧನೂರು, ಲಿಂಗಸಗೂರು, ಮಸ್ಕಿ ಮತ್ತು ಅಳಂದ ತಾಲೂಕುಗಳ ಪಿಕೆಪಿಎಸ್‌ ಅಧ್ಯಕ್ಷರಿಗಾಗಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಮತ್ತು ಡಿಜಿಟಲ್‌ ಇಂಡಿಯಾ ಪರಿಕಲ್ಪನೆ ಕುರಿತು ನಡೆದ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಈ ಸೌಲಭ್ಯ ಉಪಯೋಗಿಸಿಕೊಂಡು ಸಹಾರ್ದ ಎಲ್ಲಾ ಸಹಕಾರಿಗಳಿಗೆ ಉತ್ತಮ ತರಬೇತಿ ನೀಡಲಿದೆ ಎಂದರು. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಪಿಕೆಪಿಎಸ್‌ಗಳ ಮೂಲಕ 774 ಕೋಟಿ ರೂ. ಬಡ್ಡಿರಹಿತ ಕೃಷಿ ಸಾಲ ವಿತರಿಸಿ ರೈತರಿಗೆ ನೆರವಾಗಿದೆ. ಸಾಲ ಮನ್ನಾ ಯೋಜನೆಯಡಿ 1,09,000 ರೈತರ ಪೂರ್ಣ ಸಾಲ ಮನ್ನಾ ಆಗಿದ್ದು, ಜಿಲ್ಲೆಯ ರೈತರಿಗೆ
529.34 ರೋಟಿ ರೂ. ಲಾಭವಾಗಿದೆ. ಇವರಲ್ಲಿ 70,000ಕ್ಕಿಂತಲೂ ಹೆಚ್ಚು ಮಹಿಳೆಯರಿರುವುದು ವಿಶೇಷವಾಗಿದೆ.
ಕಳೆದ ವರ್ಷದಂತೆ ಈ ವರ್ಷವೂ ಈಗಾಗಲೇ ಫಸಲ್‌ ಬೀಮಾ ಯೋಜನೆಯಲ್ಲಿ 1,72,000 ರೈತರು 13.65 ಕೋಟಿ
ಪ್ರಿಮಿಯಂ ತುಂಬಿದ್ದು, ಬೀದರ ಜಿಲ್ಲೆ ಮುಂಚೂಣಿಯಲ್ಲಿದೆ. ಮಧ್ಯಮಾವಧಿ ಕೃಷಿ ಸಾಲಗಳಿಗೂ ಕೂಡ ಬಡ್ಡಿ ಮನ್ನಾ ಯೋಜನೆ ಸರ್ಕಾರದಿಂದ ಜಾರಿಯಾಗಿದ್ದು, ಮಾರ್ಚ್‌ 2018ರ ಮೊದಲು ಅಸಲು ಕಟ್ಟಿದರೆ ಬಡ್ಡಿ ಪೂರ್ಣವಾಗಿ ಮನ್ನಾ ಆಗಲಿದೆ ರೈತರು ಈ ಯೋಜನೆಯ ಲಾಭ ಪಡೆಯಬೇಕು ಎಂದು ಹೇಳಿದರು.

ಇಫ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್‌. ಪಾಟೀಲ ಅವರು ಬೇವು ಲೇಪಿತ ಹರಳು ಯೂರಿಯಾ ಗೋಬ್ಬರದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಈ ಯೂರಿಯಾವನ್ನು ಸಸ್ಯಗಳು ಶೇ.40ಕ್ಕಿಂತಲೂ
ಹೆಚ್ಚು ಹೀರಿಕೊಳ್ಳಬಲ್ಲವು ಮತ್ತು ಇದು ನಿಧಾನವಾಗಿ ಪ್ರಸರಣಗೊಳ್ಳವುದರಿಂದ ಸಸ್ಯಗಳು ಚೆನ್ನಾಗಿ ಉಪಯೋಗ
ಪಡೆಯಬಲ್ಲವು ಎಂದು ಹೇದರು. ಸಹಕಾರಿ ಸಂಘಗಳ ಉಪನಿಂಬಧಕ ವಿಶ್ವನಾಥ ಮೂಲಕೂಡ, ಡಿಸಿಸಿ ಬ್ಯಾಂಕ್‌ ಸಿಇಒ ಮಲ್ಲಿಕಾರ್ಜುನ ಮಹಾಜನ್‌, ಬಿ.ಜಿ. ಹಿರೇಮಠ ಇದ್ದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು
ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳು ಎಸ್‌ .ಜಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next