Advertisement

ಯಾಚೇನಹಳ್ಳಿಯಲ್ಲಿ ಸಾವಯವ ಬೆಲ್ಲ ತಯಾರಿಕಾ ಘಟಕ

11:15 AM Sep 28, 2018 | Team Udayavani |

ತಿ.ನರಸೀಪುರ: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಯಾಚೇನಹಳ್ಳಿಯಲ್ಲಿ ಸಾವಯವ ಬೆಲ್ಲ ತಯಾರಿಕಾ ಘಟಕ ಆರಂಭಿಸಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಮಾರಾಟ ಸಹಕಾರ ಮಹಾಮಂಡಳ ನಿರ್ದೇಶಕ ವೈ.ಎನ್‌.ಶಂಕರೇಗೌಡ ಹೇಳಿದರು.

Advertisement

ತಾಲೂಕಿನ ಯಾಚೇನಹಳ್ಳಿಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2017-18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಾರುಕಟ್ಟೆಗೆ ಸಾವಯವ ಬೆಲ್ಲವನ್ನು ಪರಿಚಯಿಸಲು ಸಂಘದ ಹೆಸರಿನಲ್ಲಿ ಬೆಲ್ಲ ತಯಾರಿಕಾ ಘಟಕವನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಹಾಗೂ ಸಂಘವೇ ಪರವಾನಗಿ ಪಡೆದು ಸಂಘದ ಕಟ್ಟಡದಲ್ಲಿಯೇ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಎ ಗ್ರೇಡ್‌ನ‌ಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 3.30 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸರ್ಕಾರದ ಸಾಲಮನ್ನಾ ಯೋಜನೆಯಿಂದಾಗಿ ಈ ವರ್ಷ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದೂ ಹೇಳಿದರು. 

ಸಂಘದ ಸಿಇಒ ವೈ.ಕೆ.ಕ್ಯಾತೇಗೌಡ ಮಾತನಾಡಿ, ಮುಂದಿನ 2018-19ನೇ ಸಾಲಿಗೆ 10.85 ಲಕ್ಷ ರೂ ಖರ್ಚು ಹಾಗೂ 17.28 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. 6.42 ರೂ. ಗಳ ನಿವ್ವಳ ಲಾಭ ನಿರೀಕ್ಷಿಸಲಾಗಿದೆ. ಸಂಘದ ಕಚೇರಿಯಲ್ಲಿ ಈ ಭಾಗದ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡುತ್ತಿದ್ದೇವೆ. ಕಾಲಕಾಲಕ್ಕೆ ಬೆಳೆ ಸಾಲವನ್ನೂ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಸಕ್ತ ಸಾಲಿನ ನಿವ್ವಳ ಲಾಭದಲ್ಲಿನ ಷೇರು ಡಿವಿಡೆಂಟ್‌ನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಬನ್ನೂರು ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಮೂರು ದಶಕ  ಸೇವೆ ಸಲ್ಲಿಸಿ ನಿವೃತ್ತರಾದ ವೈ.ಎಸ್‌.ಸ್ವಾಮಿ ದಂಪತಿ ಹಾಗೂ ನಂಜೇಗೌಡ, ಕೃಷ್ಣಪ್ಪ ಹಾಗೂ ಪುಟ್ಟರಾಜು ಅವರನ್ನು ಅಭಿನಂದಿಸಲಾಯಿತು.

Advertisement

ಸಭೆಯಲ್ಲಿ ಉಪಾಧ್ಯಕ್ಷ ಚಂದ್ರು, ನಿರ್ದೇಶಕರಾದ ಮಲ್ಲೇಶ, ಸೋಮಶೇಖರ್‌, ಲಕ್ಷ್ಮಮ್ಮ, ಮಂಗಳಮ್ಮ, ಮಾಜಿ ನಿರ್ದೇಶಕ ಸ್ವಾಮಿ, ನಾಡಗೌಡ, ಹನುಮಂತೇಗೌಡ, ದಿಲೀಪ್‌ ಹಾಜರಿದ್ದರು.       

Advertisement

Udayavani is now on Telegram. Click here to join our channel and stay updated with the latest news.

Next