Advertisement

“ಸಾವಯವ ಊಟಕ್ಕೆ  ಜನಜಾಗೃತಿ ಅಗತ್ಯ’

06:40 AM Aug 09, 2017 | Team Udayavani |

ಉಡುಪಿ: ಸಾವಯವ ಊಟದ ಇನ್ನಷ್ಟು ಜನಜಾಗೃತಿ ರೂಪಿಸಬೇಕಾಗಿದೆ ಎಂದು ಸ್ವತಃ ಎಂಬಿಬಿಎಸ್‌ ಪದವೀಧರರೂ, ಐಎಎಸ್‌ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟ ದಲ್ಲಿ 37ನೇ, ರಾಜ್ಯದಲ್ಲಿ 3ನೇ ರ್‍ಯಾಂಕ್‌ ಗಳಿಸಿದ ಬಂಟ್ವಾಳದ ನವೀನ್‌ ಭಟ್‌ ಅಭಿಪ್ರಾಯಪಟ್ಟರು.

Advertisement

ಬನ್ನಂಜೆ ಶಿರಿಬೀಡು ಶಾಲೆ ಬಳಿಯ ಶಿರಿಬೀಡು ಕ್ಯಾಂಟೀನ್‌ನಲ್ಲಿ ಶನಿವಾರ ಮಣ್ಣಿನ ಮಡಕೆಯಲ್ಲಿ ತಯಾರಿಸಿದ ಊಟವನ್ನು ಸವಿದ ಅವರು ಸುದ್ದಿಗಾರರ ಜತೆ ಮಾತನಾಡಿ, ಇದೊಂದು ಉತ್ತಮ ಆರಂಭ. ಆದರೆ ವಿವಿಧೆಡೆಗಳಲ್ಲಿ ಇಂತಹ ಕೇಂದ್ರಗಳು ಆರಂಭವಾಗಬೇಕು, ಜನರಲ್ಲಿ ಜಾಗೃತಿ ರೂಪುಗೊಳ್ಳಬೇಕು. 

ಇದು ಲಾಭಕ್ಕೆ ಎಂಬ ಅರ್ಥವಲ್ಲ. ಇಲ್ಲಿಗೇ ಈ ಪ್ರಯತ್ನ ನಿಲ್ಲದೆ ಇದನ್ನು ಅನುಸರಿಸುವಂತಾಗಲು ಜನರಿಗೆ ಇಂತಹ ಅಡುಗೆ ತಯಾರಿಸಲು ಬೇಕಾದ ತರಬೇತಿ ಕೇಂದ್ರಗಳು ಆರಂಭಗೊಳ್ಳಬೇಕು ಎಂದರು. 

ಈಗ ಜಲಮಾಲಿನ್ಯ, ಆಹಾರ ಮಾಲಿನ್ಯದಂತಹ ಸಮಸ್ಯೆಗಳು ಹೆಚ್ಚುತ್ತಿರುವಾಗ ಎಲ್ಲರೂ ಸಾವಯವ ಪದಾರ್ಥಗಳ ಸೇವನೆಗೆ ಬರಬೇಕಾಗುತ್ತದೆ ಎಂದು ಭಟ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next