Advertisement

ಅಂಗಾಂಗ ದಾನಿಗಳಿಗೆ ತೆರಿಗೆ ವಿನಾಯಿತಿ, ಮನ್ನಣೆ ಅಗತ್ಯ” ಲಾಲ್‌ ಗೋಯೆಲ್

10:09 AM Jan 15, 2018 | Team Udayavani |

ಮೂಡಬಿದಿರೆ: ಪಂಡಿತ್ಸ್ ಹೆಲ್ತ್‌ ರೆಸಾರ್ಟ್‌ನಲ್ಲಿ ಆರ್ಗನ್‌ ಡೊನೇಶನ್‌ ಫೌಂಡೇಶನ್‌ ಆಫ್‌ ಇಂಡಿಯಾ ಆಶ್ರಯದಲ್ಲಿ ಮಂಗಳೂರಿನ ಯೇನಪೊಯ ಮೆಡಿಕಲ್‌ ಕಾಲೇಜು, ಮೂಡಬಿದಿರೆ ಮತ್ತು ಮಥುರಾ ರೋಟರಿ ಕ್ಲಬ್‌ ಹಾಗೂ ಪಂಡಿತ್ಸ್ ಸಹಭಾಗಿತ್ವದಲ್ಲಿ ನಡೆದ “ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ’ವನ್ನು ಮೂಡಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾ ಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸಿದರು.

Advertisement

ದಧೀಚಿ ಮಹರ್ಷಿಯು ದೇವತೆಗಳಿಗೆ ತನ್ನ ಮೂಳೆ ಗಳನ್ನು ದಾನ ಮಾಡಿದ ಕಥೆಯನ್ನು ಉದಾಹರಿಸಿದ ಸ್ವಾಮೀಜಿ ಯವರು, ಬದುಕು ಮುಗಿದ ಬಳಿಕವೂ ವ್ಯಕ್ತಿಯ ಅಂಗಾಂಗಗಳ ಮೂಲಕ ಇನ್ನೊಬ್ಬ ಅಥವಾ ಹಲವಾರು ಮಂದಿ ತಮ್ಮ ಬದುಕನ್ನು ಮುಂದುವರಿಸುವಂತೆ ಆಗುವುದರಲ್ಲೇ ಜನ್ಮ ಸಾರ್ಥಕತೆಯನ್ನು ಕಾಣಬಹುದು’ ಎಂದರು.

ಅವಘಡಗಳಾದಾಗ ಅಂಗಾಂಗ ದಾನ ಮಾಡಲು ಈಗಿನ ಕಾನೂನು ಕಟ್ಟಳೆಗಳಲ್ಲಿ ಸಮರ್ಪಕವಾಗಿ ಮಾರ್ಪಾಡು ತರಬೇಕಾಗಿದೆ ಎಂದು ತಿಳಿಸಿದ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಈ ಬಗ್ಗೆ ತಾವು ಸರಕಾರದ ಮಟ್ಟದಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.

ಶಾಸಕ ಕೆ. ಅಭಯಚಂದ್ರ ಪಂಡಿತ್ಸ್ನ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಯೇನಪೊಯ ಮೆಡಿಕಲ್‌ ಕಾಲೇಜಿನ ನೆಫ್ರಾಲಜಿ ವಿಭಾಗ ಮುಖ್ಯಸ್ಥ ಡಾ| ಸಂತೋಷ್‌ ಪೈ ಅವರು ಅಂಗಾಂಗ ದಾನದ ಕುರಿತಾದ ಹಲವು ಸಂಶಯಗಳಿಗೆ ಸಮರ್ಪಕ ಉತ್ತರ ನೀಡಿದರು.

ಯೇನಪೊಯ ಮೆಡಿಕಲ್‌ ಕಾಲೇಜಿನ ಕುಲಪತಿ ಯೇನಪೊಯ ಅಬ್ದುಲ್ಲಾ ಕುಂಞಿ ಅವರು ಯೇನಪೊಯದಲ್ಲಿ ಅಂಗಾಂಗ ಮರುಜೋಡಣೆಯನ್ನು ಉಚಿತವಾಗಿ ಇಲ್ಲವೇ ಗರಿಷ್ಠ ರಿಯಾಯಿತಿ ದರದಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿ ತಾವೂ ತಮ್ಮ ಅಂಗಾಂಗ ದಾನ ಘೋಷಿಸಿರುವುದಾಗಿ ತಿಳಿಸಿದರು.

Advertisement

ಸರಕಾರಿ ಪುರಸ್ಕಾರ, ತೆರಿಗೆ ವಿನಾಯಿತಿ ಲಾಲ್‌ ಗೋಯೆಲ್‌ ಮಾತನಾಡಿ, ಸರಕಾರವು ಅಂಗಾಂಗ ದಾನಿಗಳನ್ನು ಸರಕಾರಿ ಮಟ್ಟದಲ್ಲಿ ಗುರುತಿಸುವುದು, ಪುರಸ್ಕಾರ ನೀಡುವುದು, ಆದಾಯ ತೆರಿಗೆ ವಿನಾಯಿತಿ ನೀಡುವುದೇ ಮೊದಲಾದ ಕ್ರಮಗಳ ಮೂಲಕ ಈ ಆಂದೋಲನವನ್ನು ಯಶಸ್ವಿಗೊಳಿಸಬೇಕಾಗಿದೆ. ಜತೆಗೆ ಅಂಗಾಂಗ ದಾನ ಪತ್ರಕ್ಕೆ ಆಧಾರ್‌ ಜೋಡಿಸುವ ಕಾರ್ಯವೂ ನಡೆಯಬೇಕಾಗಿದೆ ಎಂದು ಹೇಳಿದರು.

ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಆದಾಯ ತೆರಿಗೆ ಪ್ರ. ಕಮಿಷನರ್‌ ನರೋತ್ತಮ ಮಿಶ್ರಾ, ಮಂಗಳೂರು ವಿಮಾನನಿಲ್ದಾಣದ ಸಿಐಎಸ್‌ಎಫ್‌ ಡಿಸಿ ಅಮಿತ್‌ ಕುಮಾರ್‌, ಡಾ| ವೇದಮೂರ್ತಿ ಐಪಿಎಸ್‌, ಸುವರ್ಣ ಸಂಭ್ರಮದಲ್ಲಿರುವ ಮೂಡಬಿದಿರೆ ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಕಾಂತ್‌ ಕಾಮತ್‌, ಕಾರ್ಯದರ್ಶಿ ಮೊಹಮ್ಮದ್‌ ಆರಿಫ್‌, ರೋಟರಿ ಕ್ಲಬ್‌ ಆಫ್‌ ಮಥುರಾ ಉಪಾಧ್ಯಕ್ಷ ದೀಪಕ್‌ ಗೋಯೆಲ್‌ ಮೊದಲಾದವರು ಉಪಸ್ಥಿತರಿದ್ದರು. ಪಂಡಿತ್ಸ್ನ ಅಧ್ಯಕ್ಷೆ ರೂಬಿ ಅಗರ್‌ವಾಲ್‌ ಸ್ವಾಗತಿಸಿದರು.

ಪ್ರಾಸ್ಟೇಟ್‌ ಕೇರ್‌ ಫೌಂಡೇಶನ್‌ಗೆ ಚಾಲನೆ
ಆರ್ಗನ್‌ ಡೊನೇಶನ್‌ ಫೌಂಡೇಶನ್‌ನ ಅಧ್ಯಕ್ಷ, ಪಂಡಿತ್ಸ್ ಹೆಲ್ತ್‌ ರೆಸಾರ್ಟ್‌ನ ಚೀಫ್‌ ಪ್ರೊಮೋಟರ್‌ ಲಾಲ್‌ ಗೋಯೆಲ್‌ ಅವರು ಯೇನಪೊಯ ಮೆಡಿಕಲ್‌ ಕಾಲೇಜಿನ ಯುರಾಲಜಿ ವಿಭಾಗದ ಮುಖ್ಯಸ್ಥ ಮುಜಿಬುರ್‌ ರೆಹ್ಮಾನ್‌ ಅವರು ರೂಪಿ ಸಿದ ಪ್ರಾಸ್ಟೇಟ್‌ ಕೇರ್‌ ಫೌಂಡೇಶನ್‌ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next