Advertisement
ಜು.12 ರಂದು ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ಕಮಲವ್ವ ಅವರಿಗೆ ಉನ್ನತ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ವೈದ್ಯರ ನಿರಂತರ ಚಿಕಿತ್ಸೆ ಫಲಕಾರಿಯಾಗದ ಕಾರಣ ಜು.13 ರಂದು ಮೆದುಳು ನಿಷ್ಕಿಯಗೊಂಡಿದೆ ಎಂಬುದಾಗಿ ತಜ್ಞ ವೈದ್ಯರು ಧೃಡೀಕರಿಸಿದ್ದರು.
Related Articles
Advertisement
ಕಿಡ್ನಿ ಕಸಿ ಮಾಡುವ ತಂಡದಲ್ಲಿ ಕ್ರಿಟಿಕಲ್ ಕೇರ್, ನೆಪ್ರೋಲಜಿ, ಯುರೋಲಜಿ, ಪ್ಲಾಸ್ಟಿಕ್ ಸರ್ಜರಿ, ಅನಸ್ತೇಶಿಯಾ ವಿಭಾಗದ ವೈದ್ಯರು ಮತ್ತು ಒ.ಟಿ ಟೆಕ್ನೀಷಿಯನ್, ನರ್ಸಿಂಗ್ ಹಾಗೂ ಪಿ.ಆರ್.ಓ ವಿಭಾಗದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಈ ಅಂಗಾಂಗಗಳನ್ನು ದಾನ ಮಾಡುವ ಪ್ರಕ್ರಿಯೆಯನ್ನು ಜೀವ ಸಾರ್ಥಕತೆಯು (ಕರ್ನಾಟಕ ಕಸಿ ಪ್ರಾಧಿಕಾರ ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಮತ್ತು ಎಸ್.ಡಿ.ಎಮ್ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಯಿತು. ಎಸ್‌ಡಿಎಮ್ ಆಸ್ಪತ್ರೆಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತ್ವರಿತವಾಗಿ ಅಂಗಾಂಗಗಳನ್ನು ತಲುಪಿಸಲು ಗ್ರೀನ್ ಕಾರಿಡಾರ್ (ಸಂಪೂರ್ಣ ಟ್ರಾಫಿಕ್ ನಿಷೇಧಿತ ಮಾರ್ಗ) ವ್ಯವಸ್ಥೆ ಕಲ್ಪಿಸಲಾಯಿತು. ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಸಿಪಿಐ ಮಲ್ಲನಗೌಡ ನಾಯ್ಕರ್ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯವಸ್ಥಾಪಕರು ಮತ್ತು ಅಧಿಕಾರಿಗಳ ಸಹಕಾರ ಹಾಗೂ ಈ ಸಂಯೋಜನೆಗೆ ಎಸ್‌ಡಿಎಮ್ ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿ ಡಾ| ನಿರಂಜನ ಕುಮಾರ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ತಿಳಿಸಿದ್ದಾರೆ.
ಸಾವಿನಲ್ಲೂ ಸಾರ್ಥಕತೆ ಜತೆಗೆ ಸಮಾಜಕ್ಕೆ ಮಾದರಿಯಾದ ಕುಟುಂಬದವರ ಕಾರ್ಯಕ್ಕೆ ಎಸ್‌ಡಿಎಂ ವಿವಿಯ ಕುಲಪತಿ ಡಾ|ಡಿ.ವೀರೇಂದ್ರ ಹೆಗ್ಗಡೆ, ಉಪಕುಲಪತಿ ಡಾ|ನಿರಂಜನಕುಮಾರ, ಆಡಳಿತ ನಿರ್ದೇಶಕ ಸಾಕೆತ್ ಶೆಟ್ಟಿ, ವೈದ್ಯಕೀಯ ಅಧಿಕ್ಷಕ ಡಾ|ಕಿರಣ ಹೆಗ್ಡೆ ಸೇರಿದಂತೆ ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.