Advertisement

ಆದೇಶ ಉಲ್ಲಂಘನೆ: ವಾಹನಗಳ ವಶ

12:05 PM Jul 25, 2020 | Suhan S |

ಶಿವಮೊಗ್ಗ: ಲಾಕ್‌ಡೌನ್‌ ಅವಧಿಯಲ್ಲಿ ಆದೇಶ ಉಲ್ಲಂಘಿಸಿದ 10,992 ವಾಹನಗಳ ವಿರುದ್ಧ ಐಎಂವಿ ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದರು.

Advertisement

ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ ಡೌನ್‌ ನಿಯಮ ಉಲ್ಲಂಘಿಸಿದ್ದಕ್ಕೆ 257 ಪ್ರಕರಣ ದಾಖಲಿಸಿದ್ದು, 656 ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಲಾಕ್‌ಡೌನ್‌ ಆದೇಶ ಉಲ್ಲಂಘನೆ ಬಗ್ಗೆ 89, ಕ್ವಾರಂಟೈನ್‌ ಉಲ್ಲಂಘಿಸಿದ್ದಕ್ಕೆ 11, ಜೂಜಾಟದ 93 ಹಾಗೂ ಅಕ್ರಮ ಮದ್ಯ ಮಾರಾಟದ 64 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಕ್ವಾರಂಟೈನ್‌ ಆದೇಶ ಉಲ್ಲಂಘಿಸಿದ 17 ಜನರು ಹಾಗೂ ನೈಟ್‌ ಕರ್ಫ್ಯೂ ಉಲ್ಲಂಘಿಸಿದ 41 ಜನರ ವಿರುದ್ಧ ಕಲಂ 51(ಬಿ) ಎನ್‌ಡಿಎಂಎ ಕಾಯಿದೆ ಅಡಿ ಪ್ರಕರಣಗಳನ್ನು ದಾಖಲಾಗಿದೆ. ಸೀಗೇಹಟ್ಟಿ, ಬಿಬಿ ಸ್ಟ್ರೀಟ್‌ನಲ್ಲಿ ಒಂದು ಆಟೋ ರಿûಾಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಮಿಳಘಟ್ಟದ ಸ್ಟೀಫನ್‌ (22), ಆಶ್ರಯ ಬಡಾವಣೆಯ ಮೆಹಬೂಬ್‌ (34), ಅಣ್ಣಾನಗರದ ಮುಬಾರಕ್‌ (27) ಅವರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ ಎರಡು ದ್ವಿಚಕ್ರ ವಾಹನಗಳನ್ನು ಬೆಂಕಿ ಹಚ್ಚಿದ್ದ ಇಬ್ಬರು ಆರೋಪಿಗಳನ್ನು ಬಂ ಸಲಾಗಿದೆ. ತಿರುಪಯ್ಯನಬೀದಿಯ ಚೇತನ್‌ ಅಲಿಯಾಸ್‌ ಬ್ರಿಟೀಶ್‌ (30), ಗುರುರಾಜ್‌ (20) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಎಎಸ್‌ಪಿ ಎಚ್‌.ಟಿ. ಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next