Advertisement
ಸುಮಾರು 86 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಅಧಿಕಾರಿಗಳು ಕಾರಣರಾಗಿದ್ದು, ಇದರಿಂದ ಇಲಾಖೆಗೆ ಆಥಿಕ ನಷ್ಟವಾಗುವ ಜತೆಗೆ ಸಾರ್ವಜನಿಕರಿಗೆ ಅಗತ್ಯವಾದ ಕಾಮಗಾರಿಗಳ ಗುಣಮಟ್ಟದಲ್ಲೂ ನ್ಯೂನ್ಯತೆ ಸೃಷ್ಟಿಯಾಗಿತ್ತು. ಈ ಸಂಬಂಧ ತನಿಖಾ ತಂಡ ನೀಡಿದ ವರದಿಯ ಶಿಫಾರಸಿನ ಅನ್ವಯ ಹೆಚ್ಚುವರಿ ಕಾರ್ವನಿರ‍್ವಾಹಕ ಎಂಜಿನಿಯರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಕನ್ನಡ-ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆದೇಶ ನೀಡಿದ್ದಾರೆ.
Related Articles
Advertisement
ತನಿಖಾ ಸಂರ‍್ಭದಲ್ಲಿ ಅಧಿಕಾರಿಗಳ ಕೈವಾಡದಿಂದಲ್ಲೇ ಅವ್ಯವಹಾರ ಹಾಗೂ ನಷ್ಟವುಂಟಾಗಿರುವುದು ದೃಢಪಟ್ಟಿದೆ. ಒಟ್ಟಾರೆಯಾಗಿ 29.72ಕೋಟಿ ರೂ.ನ್ನು ಕಾಮಗಾರಿ ನಿರ್ವಹಣೆ ಮಾಡದೇ ಹಣ ಪಾವತಿ ಮಾಡಿರುವ ಗಂಭೀರ ಲೋಪ ಪತ್ತೆಯಾಗಿದೆ. ಜತೆಗೆ ಇದರಿಂದಾಗಿ ಇಲಾಖೆಗೆ 57.16ಕೋಟಿ ರೂ. ನಿಯಮ ಬಾಹಿರವಾಗಿ ವೆಚ್ಚವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಕ್ರಮ :
ಈ ಹಗರಣಕ್ಕೆ ಕಾರಣರಾದ ಅಥಣಿ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್, ನಾಲ್ವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, 12 ಶಾಖಾಧಿಕಾರಿಗಳು, ಒಬ್ಬ ಲೆಕ್ಕಾಧಿಕಾರಿ, 1 ಸಹಾಯಕ ಲೆಕ್ಕಾಧಿಕಾರಿ ಹಾಗೂ ಒಬ್ಬ ಕೇಸ್ ವರ‍್ಕರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಸಚಿವ ಸುನೀಲ್ ಕುಮಾರ್ ನೀಡಿದ ಸೂಚನೆ ಅನ್ವಯ ಹೆಸ್ಕಾಂ ಆದೇಶ ಹೊರಡಿಸಿದೆ. ಅವ್ಯವಹಾರಕ್ಕೆ ಪರೋಕ್ಷವಾಗಿ ಸಹಕರಿಸಿದ 1ಲೆಕ್ಕಾಧಿಕಾರಿ, ನಾಲ್ವರು ಕಿರಿಯ ತಾಂತ್ರಿಕ ಸಹಾಯಕರು, 1ಹಿರಿಯ ಸಹಾಯಕ ಹಾಗೂ ಒಬ್ಬ ಕೇಸ್ ವರ‍್ಕರನ್ನು ಬೇರೆಡೆಗೆ ವರ‍್ಗಾಯಿಸಲಾಗಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಇಂಧನ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಯಾವುದೇ ಮೂಲೆಯಲ್ಲಿ ಈ ಬಗೆಯ ಘಟನೆಗಳು ನಡೆದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ನಾನು ಸಾರ‍್ವಜನಿಕರಲ್ಲಿ ಮನವಿ ಮಾಡುತ್ತೇನೆ. ನಾಗರಿಕರು ಹಾಗೂ ಸಾರ‍್ವಜನಿಕ ಸಂಸ್ಥೆಗಳ ನೆರವಿನೊಂದಿಗೆ ಇಂಧನ ಇಲಾಖೆಯ ಎಲ್ಲ ಹಂತಗಳಲ್ಲೂ ಪಾರದರ್ಶಕತೆ ತರುವುದಕ್ಕೆ ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ. ಭ್ರಷ್ಟಾಚಾರ ಹಾಗೂ ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ. -ವಿ.ಸುನೀಲ್ ಕುಮಾರ್, ಕನ್ನಡ-ಸಂಸ್ಕೃತಿ ಮತ್ತು ಇಂಧನ ಸಚಿವ