Advertisement
ರಾಜ್ಯ ಸರ್ಕಾರ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕನಿಷ್ಠ 10 ಕೃಷಿ ಹೊಂಡಗಳ ನಿರ್ಮಾಣ, 20 ಎಕರೆಯಲ್ಲಿ ಕ್ಷೇತ್ರ ಬದು ನಿರ್ಮಾಣ ಮಾಡಿ, ಅಲ್ಲಿ ಅರಣ್ಯೀಕರಮಾಡಲು ಗುಂಡಿ ತೋಡುವಂತೆ ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ 200 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ವಿಸ್ತರಿಸಲು ಗುಂಡಿ ತೋಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ದನದ ಕೊಟ್ಟಿಗೆ ನಿರ್ಮಾಣ, ಸರ್ಕಾರಿ ಕಟ್ಟಡ ಗಳ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಗುಂಡಿ ತೆರೆಯುವಂತೆ ಆದೇಶ ಹೊರಡಿಸಲಾಗಿದೆ. ಆದರೆ, ಪ್ರಮುಖವಾಗಿ ಈ ಕಾಮಗಾರಿಗಳು ತೋಟಗಾರಿಕೆ, ಕೃಷಿ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಆರಂಭದಿಂದಲೂ ಈ ಇಲಾಖೆಗಳನ್ನು ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಗತ್ಯ ಸೇವೆ ಇಲಾಖೆಗಳಿಂದ ಹೊರಗಿಡಲಾಗಿದೆ. ಅಗತ್ಯ ಇಲಾಖೆ ವ್ಯಾಪಿಗೆ ಸೇರಿಸಿದರೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಕಾರಿಗಳನ್ನು ಸೇರಿಸಿಕೊಳ್ಳದಂತೆ ಇಲಾಖೆ ುìದರ್ಶಿ ಆದೇಶ ಹೊರಡಿಸಿದ್ದಾರೆ.
ಅಂಗಡಿಗಳನ್ನು ಬಂದ್ ಮಾಡಿರುವುದರಿಂದ ೇ ರೀತಿಯ ಕಚ್ಚಾವಸ್ತುಗಳು ದೊರೆಯುತ್ತಿಲ್ಲ. ಕಾಮಗಾರಿಗೆ ಬೇಕಾದ ಅಗತ್ಯ ಕಚ್ಚಾ ವಸ್ತು ಖರೀದಿಸಲಾಗದ ಸ್ಥಿತಿಯಲ್ಲಿ ಜನರು ಇರುವಾಗ ವೈಯಕ್ತಿಕ ಉದ್ಯೋಗ ಪಡೆಯಲು ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸರ್ಕಾರ ನರೆಗಾ ಕೂಲಿಯ ಸುಮಾರು 700 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ನರೇಗಾ ಕಾರ್ಮಿಕರು ಹಳೇ ಬಾಕಿ ಬಾರದೇ ಸಂಕಷ್ಟದಲ್ಲಿದ್ದಾರೆ. ಅದರ ಮಧ್ಯೆ ಹೊಸ ಕಾಮಗಾರಿಗೆ ಆದೇಶ ನೀಡಿರುವುದು ಗ್ರಾಮೀಣ ಭಾಗದಲ್ಲಿ ಜಾರಿಗೆ ಕಷ್ಟವಾಗಿದ್ದು, ಗ್ರಾಪಂ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ● ಶಂಕರ ಪಾಗೋಜಿ