ಶಿರಸಿ: ಭಾರಿ ಮಳೆ ಇರುವ ಕಾರಣ ಜಿಲ್ಲಾಡಳಿತ ಮಂಗಳವಾರ ಜೂ.5 ರಂದು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಆದರೆ, ಶಾಲೆ ಆರಂಭವಾಗುವ ಕೇವಲ ಅರ್ಧ ಗಂಟೆ ಮೊದಲು ಆದೇಶ ನೀಡಿದ್ದು, ಮಕ್ಕಳು -ಪಾಲಕರು ಹಾಗೂ ಸ್ವತಃ ಶಿಕ್ಷಣ ಇಲಾಖೆಯಲ್ಲಿ ಗೊಂದಲ ಸೃಷ್ಟಿಸಿದೆ.
ಹವಾಮಾನ ಇಲಾಖೆ ಇಷ್ಟೊಂದು ಕ್ರಿಯಾಶೀಲ ಇದ್ದಾಗಲೂ ತುರ್ತು ರಜೆ ಘೋಷಣೆ ಮಾಡುವ ಆದೇಶ ಕನಿಷ್ಠ 3-4 ಗಂಟೆ ಮೊದಲಾದರೂ ನೀಡಬೇಕು. ಮಕ್ಕಳು ಶಾಲೆಗೆ ಹೋದ ಬಳಿಕ ಆದೇಶ ಬಂದರೆ ಕಷ್ಟ ಎಂಬುದು ದೂರಾಗಿದೆ.
ಎಷ್ಟೋ ಹಳ್ಳಿಗಳಿಂದ ಬೆಳಿಗ್ಗೆ 7ರ ಹಾಲ್ಟಿಂಗ್ ಬಸ್ಸಿಗೆ ಶಾಲೆಗೆ ಹೋದವರಿಗೆ ಅತಂತ್ರ ಆಗಿದ್ದು, ಅವರು ಮನೆಗೆ ವಾಪಸ್ ಹೋಗಲು ಸಂಜೆ 5 ಗಂಟೆಗೆ ಬಸ್ ಇರುವುದರಿಂದ ಕಷ್ಟವಾಗಿದೆ. ಮಧ್ಯಾಹ್ನ ಬಿಸಿಯೂಟದ ಸಮಸ್ಯೆ ಕೂಡ ಆಗುತ್ತದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಬೇಕು ಎಂಬುದು ಪಾಲಕರ ಹಾಗೂ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.
ಮಕ್ಕಳ ವಿಚಾರದಲ್ಲಿ ವಿಳಂಬದ ಆದೇಶ ಆಗಬಾರದು ಎಂಬುದು ಇವರ ಹಕ್ಕೊತ್ತಾಯ.