Advertisement

ಕೆರೆಗಳ ಬಫ‌ರ್‌ ಝೋನ್‌ ಹೆಚ್ಚಳ ಆದೇಶ ರದ್ದು

06:20 AM Mar 06, 2019 | |

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ, ನಗರದ ಕೆರೆಗಳ ಸುತ್ತಲಿನ ಬಫ‌ರ್‌ ಝೋನ್‌ ಮಿತಿಯನ್ನು 30 ಮೀ.ನಿಂದ 75 ಮೀ. ವ್ಯಾಪ್ತಿಗೆ ಹೆಚ್ಚಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) 2016ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಇದರಿಂದಾಗಿ, ಎನ್‌ಜಿಟಿ ತೀರ್ಪು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ಜಯ ಸಿಕ್ಕಂತಾಗಿದೆ.

Advertisement

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆರೆಗಳ ಸುತ್ತಲೂ ಇರುವ ಪ್ರದೇಶವನ್ನು ಪರಿಸರ ಸಂರಕ್ಷಣಾ ವಲಯ ಎಂದು ಘೋಷಿಸಲು  ಹಾಗೂ ಆ ಕುರಿತಂತೆ ಆದೇಶ ಹೊರಡಿಸಲು ಎನ್‌ಜಿಟಿಗೆ ಅಧಿಕಾರವಿದೆ ಎಂದೂ ಹೇಳಿದ ನ್ಯಾಯಪೀಠ, ಬೆಳ್ಳಂದೂರು ಕೆರೆ ಹಾಗೂ ಅಗರ ಕೆರೆಗಳ ನಡುವಿನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸುವುದನ್ನು ನಿರ್ಬಂಧಿಸುವುದನ್ನು ಎತ್ತಿ ಹಿಡಿದಿದೆ. 

ಈ ವಲಯಗಳಲ್ಲಿ ಸಾಫ್ಟ್ ವೇರ್‌ ಪಾರ್ಕ್‌, ವಾಣಿಜ್ಯ ಅಥವಾ ವಸತಿ ಸಂಕೀರ್ಣಗಳು, ಹೋಟೆಲ್‌ಗ‌ಳು, ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಟ್ಟಡಗಳನ್ನು ಕಟ್ಟುವುದನ್ನು ನಿಷೇಧಿಸಬೇಕೆಂದು ನ್ಯಾಯಪೀಠ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ, ಮಂತ್ರಿ ಟೆಕ್‌ ಝೋನ್‌ ಪ್ರೈ. ಲಿಮಿಟೆಡ್‌ ಹಾಗೂ ಕೋರ್‌ ಮೈಂಡ್‌ ಸಾಫ್ಟ್ ವೇರ್‌ ಆ್ಯಂಡ್‌ ಸರ್ವೀಸರ್‌ ಪ್ರೈ. ಲಿಮಿಟೆಡ್‌ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next