Advertisement

ಕತ್ತೆಗಳ ಆರ್ಭಟ

04:36 AM Jun 16, 2020 | Lakshmi GovindaRaj |

ರಿಚರ್ಡ್‌ ಬ್ರಿನ್‌ಸ್ಲಿ ಶೆರಿಡನ್‌ ಎಂಬಾತ ಬ್ರಿಟನ್ನಿನ ಕವಿ, ನಾಟಕಕಾರ. ಈತ ತನ್ನ ನಾಟಕಗಳಲ್ಲಿ ಹೇಗೋ ಹಾಗೆಯೇ ನಿಜಜೀವನದಲ್ಲೂ ಚುರುಕು ಮಾತಿಗೆ ಹೆಸರುವಾಸಿ. ರಾಜಕಾರಣಿಯೂ ಆಗಿದ್ದ ಎಂದಮೇಲೆ ಕೇಳಬೇಕೆ? 32 ವರ್ಷಗಳ  ಪರ್ಯಂತ ಶೆರಿಡನ್‌ ಇಂಗ್ಲೆಂಡಿನ ಸಂಸತ್ತಿನಲ್ಲಿ ಸದಸ್ಯನಾಗಿದ್ದ. ಅದೊಮ್ಮೆ ಸಂಸತ್ತಿನಲ್ಲಿ ಯಾವುದೋ ವಿಷಯದ ಮೇಲೆ ಗಂಭೀರವಾದ (ಗಂಭೀರವಾದ ಎಂದರೆ ಗೊತ್ತಲ್ಲ?

Advertisement

ಉಚ್ಚ ಕಂಠದ ಗಲಭೆ!) ಚರ್ಚೆಯಾಗುತ್ತಿದ್ದಾಗ ಶೆರಿಡನ್‌ ಎದ್ದುನಿಂತು- ಈ ಸಭೆಯಲ್ಲಿರುವ ಅರ್ಧದಷ್ಟು  ಮಂದಿ ಕತ್ತೆಗಳು ಎಂದು ಕಿರುಚಿದ. ಸಭೆ ಸ್ತಬ್ಧವಾಯಿತು! ಅದುವರೆಗೆ ಥೇಟ್‌ ಕತ್ತೆಗಳಂತೆಯೇ ಆ ಸಂಸದರು ಕೂಗಿ, ಅರಚಿ ಗಲಾಟೆ ಎಬ್ಬಿಸಿದ್ದರೂ, ಈಗ ತಮ್ಮನ್ನು ಒಬ್ಟಾತ ಕತ್ತೆಗೆ ಹೋಲಿಸಿದ್ದನ್ನು ಮಾತ್ರ ಅವರು ಸಹಿಸಲಿಲ್ಲ. ಶೆರಿಡನ್‌  ಅಸಂಸದೀಯ ಭಾಷೆ ಬಳಸಿದ್ದಾನೆ, ಆತತನ್ನ ಮಾತನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯ ಶುರುವಾಯಿತು. ಸಭೆ ತನ್ನ ಚರ್ಚೆಯ ಹಾದಿ ಬಿಟ್ಟು ಶೆರಿಡನ್‌ ಹೇಳಿದ   ಮಾತಿನ  ಭಾಷೆಯ ಚರ್ಚೆಯ ಕಡೆ ಹೊರಳಿತು.

ಗದ್ದಲ ತಾರಕಕ್ಕೇರಿ ದಾಗ ಸಂಸತ್ತಿನ ಸಭಾಪತಿ ಗಳು ಶೆರಿಡನ್‌ಗೆ ಸೂಚನೆ ಕೊಟ್ಟರು. ಆತ ತನ್ನ ಮಾತನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಸೂಚಿಸಿದರು.  ಶೆರಿಡನ್‌ಗೆ ಬೇರೆ ದಾರಿ  ಇಲ್ಲವಾಯಿತು. ಆತ ಎದ್ದುನಿಂತು ಗಂಭೀರವಾಗಿ ಹೇಳಿದ: ಸಭಾಪತಿಗಳೇ ಮತ್ತು ಸಂಸದರೇ, ಆಡಿದ ಮಾತಿ ಗಾಗಿ ನಾನು ನಿಮ್ಮ ಕ್ಷಮೆ ಕೇಳುತ್ತೇನೆ. ಮಾತ್ರವಲ್ಲ, ಆಡಿದ ಮಾತನ್ನು ನಾನು ವಾಪಸ್‌ ತೆಗೆದು ಕೊಳ್ಳುತ್ತಿ ದ್ದೇನೆ. ಈ ಸಭೆಯಲ್ಲಿರುವ ಅರ್ಧದಷ್ಟು ಮಂದಿ ಕತ್ತೆಗಳಲ್ಲ.

* ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next