Advertisement
1. ಇತ್ತೀಚೆಗೆ, “ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ “ಹರೇಕಳ ಹಾಜಬ್ಬ’ ಅವರನ್ನು “ಅಕ್ಷರ ಸಂತ’ ಎಂದು ಕರೆಯಲಾಗುತ್ತದೆ.2. ಅವರು ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಕೊಣಾಜೆ ಸಮೀಪದ ಹರೇಕಳ ಎಂಬ ಗ್ರಾಮದವರು.
3. ಬೀಫಾತುಮ್ಮ ಮತ್ತು ಕುಟ್ಟಿಮಾಕ ದಂಪತಿಯ ಮಗನಾದ ಹಾಜಬ್ಬ, ಶಾಲೆಗೆ ಹೋಗಿ ಅಕ್ಷರ ಕಲಿತವರೇ ಅಲ್ಲ.
4. ಮೊದಲು ಬೀಡಿ ಕಟ್ಟಿ ಕುಟುಂಬ ನಿರ್ವಹಿಸುತ್ತಿದ್ದ ಅವರು, ಮುಂದೆ ಕಿತ್ತಳೆ- ಮೂಸಂಬಿ ವ್ಯಾಪಾರದಲ್ಲಿ ತೊಡಗಿಸಿಕೊಂಡರು.
5. ಒಮ್ಮೆ, ಮಂಗಳೂರಿನ ರಸ್ತೆಯಲ್ಲಿ ಹಣ್ಣು ಮಾರುತ್ತಿದ್ದಾಗ ಗ್ರಾಹಕರೊಬ್ಬರು ಇಂಗ್ಲಿಷ್‌ನಲ್ಲಿ ಹಣ್ಣಿನ ದರವನ್ನು ವಿಚಾರಿಸಿದರಂತೆ. ಅವರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಈ ಘಟನೆಯ ನಂತರ, ವಿದ್ಯೆಯ ಮಹತ್ವವನ್ನು ಅರಿತುಕೊಂಡ ಹಾಜಬ್ಬ, ತನ್ನೂರಿನಲ್ಲಿ ಒಂದು ಶಾಲೆ ನಿರ್ಮಿಸುವ ನಿರ್ಧಾರಕ್ಕೆ ಬಂದರು.
6. ಬಡವನೊಬ್ಬ ಶಾಲೆ ಕಟ್ಟಿಸುವುದೆಂದರೆ ಸಾಮಾನ್ಯವೇ? ಅದಕ್ಕಾಗಿ ಅವರು ಮಾಡಿಸ ಸಾಹಸ ಒಂದೆರಡಲ್ಲ. ದಿನವೂ ಜಿಲ್ಲಾ ಪಂಜಾಯಿತಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದು, ಅಧಿಕಾರಿಗಳಗಳ ನಿರ್ಲಕ್ಷ್ಯ, ಅವಮಾನಕ್ಕೆ ತುತ್ತಾದರು.
7. ಕೊನೆಗೂ, 1999ರಲ್ಲಿ, ನ್ಯೂಪಡು³ ಗ್ರಾಮದ ಮಸೀದಿಯ ಮದ್ರಸ ಕಟ್ಟಡದಲ್ಲಿ ತಾತ್ಕಾಲಿಕವಾಗಿ 28 ಮಕ್ಕಳ ಪ್ರಾಥಮಿಕ ಶಾಲೆ ತೆರೆಯುವಲ್ಲಿ ಯಶಸ್ವಿಯಾದರು.
8. ನಂತರ, ಕಿತ್ತಳೆ ಹಣ್ಣು ಮಾರಿದ ದುಡ್ಡು, ಸಹೃದಯಿಗಳ ನೆರವಿನಿಂದ ಸರಕಾರಿ ಜಾಗವನ್ನು ಖರೀದಿಸಿ, ಶಾಲೆಗೆ ಕಟ್ಟಡವನ್ನು, ಆಟದ ಮೈದಾನವನ್ನು ನಿರ್ಮಿಸಿದರು.
9. 2007ರಲ್ಲಿ ಪ್ರೌಢಶಾಲೆಯನ್ನೂ ನಿರ್ಮಿಸಿದ ಹಾಜಬ್ಬನವರು, ತಮಗೆ ಬಂದ ಪ್ರಶಸ್ತಿಗಳ ಹಣವನ್ನೂ ಶಾಲೆಗಾಗಿಯೇ ವಿನಿಯೋಗಿಸಿದ್ದಾರೆ.
10. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಿ.ಎನ್.ಎನ್.ಐ.ಬಿ.ಎನ್ ಸುದ್ದಿವಾಹಿನಿ ನೀಡುವ ಪ್ರಶಸ್ತಿಯೂ ಸೇರಿದಂತೆ ಅನೇಕ ಸಮ್ಮಾನಗಳು ಲಭಿಸಿವೆ.