Advertisement
ಕಿತ್ತಳೆ ಕೆಂಪು ಎದೆಯ ಪಾರಿವಾಳವು ನಮಗೆಲ್ಲ ಪರಿಚಿತವಾದ ಕಾಡು ಪಾರಿವಾಳದಷ್ಟು ದೊಡ್ಡ ಹಕ್ಕಿ. Orange-breasted Green – pigeon (Teron bicincta ) R pigeon +-ಗಾತ್ರದಲ್ಲಿ 29 ಸೆಂ.ಮೀನಷ್ಟಿದೆ. ಬಾಳೆ ಸುಳಿಯ ಹಸಿರಿನ ಮೈ ಬಣ್ಣ ಎದ್ದುಕಾಣುತ್ತದೆ. ಗಂಡು ಹಕ್ಕಿಯ ಎದೆಯ ಮೇಲೆ ಕೆಂಪು ಬಣ್ಣ -ಅದರ ಕೆಳಗೆ ಕಿತ್ತಳೆ ಬಣ್ಣವಿದೆ. ಈ ಬಣ್ಣವೇ ಈ ಪಾರಿವಾಳವನ್ನು ಗುರುತಿಸಲು ಸಹಾಯಕವಾಗಿರುವುದು. ತಲೆ ಬೂದು ಬಣ್ಣದಿಂದ ಕೂಡಿದೆ.
Related Articles
Advertisement
ಕಿತ್ತಳೆ ಕೆಂಪು ಎದೆಯ ಪಾರಿವಾಳವು ಸಮಶೀತೋಷ್ಣ, ಹಸಿರು ಎಲೆ ತುಂಬಿದ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಕಾಡಿನ ಸಮೀಪದಲ್ಲಿರುವ ತೋಟದ ಪಟ್ಟೆ -ಕಲ್ಲು ಪಾರೆಗಳಿರುವ ಜಾಗದಲ್ಲೂ ಇದು ಇರುನೆಲೆ ಮಾಡಿಕೊಂಡಿರುತ್ತದೆ. ಹಸಿರಿನಿಂದ ಕೂಡಿದ ಮರಗಳ ಮೇಲೆ ಕುಳಿತಾಗ ಇದನ್ನು ಗುರುತಿಸುವುದೇ ಕಷ್ಟ.
ಇದು ಜೋಡಿಯಾಗಿ ಇಲ್ಲವೇ ಎರಡು ಮೂರು, ಆರರ ಗುಂಪಿನಲ್ಲಿ ಒಟ್ಟಿಗೆ ಇರುತ್ತದೆ. ಸಮಶೀತೋಷ್ಣ ಕಾಡು, ಹಿಮಾಲಯದ ತಪ್ಪಲು ಪ್ರದೇಶ, ಮಣಿಪುರ, ಪಶ್ಚಿಮ ಬಂಗಾಲ, ಬಂಗ್ಲಾದೇಶ, ಪೂರ್ವ ಮತ್ತು ಪಶ್ಚಿಮ ಘಟ್ಟದ ಪ್ರದೇಶದ ಭಾಗದಲ್ಲಿ ಇವು ಇರುನೆಲೆ ಮಾಡಿಕೊಂಡಿತ್ತವೆ. ಬೆಳಗಾವಿ, ಕಾರವಾರ, ಕುಮಟಾ ಹೊನ್ನಾವರ, ಸಪ್ಪಿನ ಹೊಸಳ್ಳಿ- ಕೇರಳ, ಆಂಧ್ರಪ್ರದೇಶಗಳಲ್ಲಿ ಇವು ಕಂಡಿವೆ.
ಕಪೋತ, ಪಾರಿವಾಳ, ಗುಮ್ಮಾಡಲು ಹಕ್ಕಿ, ಚೋರೆ ಹಕ್ಕಿ, ಹೊರಸಲು ಹಕ್ಕಿ, ಬೆಳವನ ಹಕ್ಕಿ, ಕಿರು ಚೋರೆ, ಮಣಿ ಹೊರಸಲು ಹಕ್ಕಿ, ಹರಳು ಚೋರೆ ಹಕ್ಕಿ ಎಂಬ ಹೆಸರಿನಿಂದ ಧ ಉಪಜಾತಿಯ ಪಾರಿವಾಳಗಳನ್ನು ಕನ್ನಡದಲ್ಲಿ ಹೆಸರಿಸಲಾಗಿದೆ. ಈ ಹೆಸರುಗಳನ್ನು ಕರೆಯುವಾಗ ಪ್ರಬೇಧದ ಲಕ್ಷಣ ,ಬಣ್ಣ -ಆಧರಿಸಿ ಗುರುತಿಸಲಾಗಿದೆ.
ಸಾಮಾನ್ಯವಾಗಿ ಎಲ್ಲಾ ಪಾರಿವಾಳಗಳ ಕೋರ್ಪ ಚೀಲದಲ್ಲಿ ಹಾಲು ಉತ್ಪಾದನೆ ಯಾಗುತ್ತದೆ. ಈ ಹಾಲು ಗಟ್ಟಿ ಕಾಳನ್ನು ಮೆತ್ತಗೆ ಮಾಡಿ ಮರಿಗಳಿಗೆ ಉಣಿಸಲು -ಅಂದರೆ ಗುಟುಕು ಕೊಡಲು ನೆರವಾಗುತ್ತದೆ. ಈ ಹಾಲು ಅತ್ಯಂತ ಪೌಷ್ಟಿಕಾಂಶ ದಿಂದ ಕೂಡಿದ್ದು, ಔಷಧೀಯ ಗುಣ ಹೊಂದಿದೆ. ಮಾನವನ ನರದೌರ್ಬಲ್ಯ, ಹೃದಯ ಸಂಬಂಧಿ ಕಾಯಿಲೆ ನಿವಾರಣೆಗೆ ಈ ಹಾಲುಪರಿಣಾಮಕಾರಿ ಮದ್ದು.
ಚಿಕ್ಕ ಹಣ್ಣು, ಆಲ, ಬಸರಿ, ಬೂರಲ,- ಹೂವಿನ ಎಳೆ ಭಾಗ, ಪರಾಗ ಇದರ ಪ್ರಧಾನ ಆಹಾರ. ಹೂವಿಗೆ ಬರುವ ಚಿಕ್ಕ ಕೀಟಗಳನ್ನು ತಿನ್ನುತ್ತದೆಯೋ ಎಂಬುದು ತಿಳಿದಿಲ್ಲ. ಭಿನ್ನ ಮೆಲುದನಿಯ ಸಿಳ್ಳೆ ಕೂಗೇ ಇದರ ಭಾಷೆ.
ಮರಿ ಮಾಡುವ ಸಮಯದಲ್ಲಿ ಗಂಡು ಕಾದಾಡಿ ತನ್ನ ಪ್ರಿಯತಮೆಯನ್ನು ಒಲಿಸಿಕೊಳ್ಳುತ್ತದೆ. ಈ ಹಕ್ಕಿ 8 ಮೀಟರ್ ಎತ್ತರದಲ್ಲಿ ಗೂಡು ನಿರ್ಮಿಸಿಕೊಳ್ಳುತ್ತದೆ. ಅದರಲ್ಲಿ ಬಿಳಿಬಣ್ಣದ ಎರಡು ಮೊಟ್ಟೆ ಇಟ್ಟು, ಗಂಡು- ಹೆಣ್ಣು ಸೇರಿ ಕಾವುಕೊಟ್ಟು ಮರಿಮಾಡುತ್ತವೆ. 12 ರಿಂದ 14 ದಿನದಲ್ಲಿ ಮೊಟ್ಟೆ ಬಲಿತು ಮರಿಯಾಗುತ್ತದೆ.