Advertisement

ಕರಾವಳಿ ಭಾಗದಲ್ಲಿ ಆರೆಂಜ್ ಆಲರ್ಟ್: ನಾಳೆ ಭಾರೀ ಮಳೆಯಾಗುವ ಸಾಧ್ಯತೆ

09:21 PM Sep 25, 2019 | Naveen |

ಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿ ಭಾಗದಲ್ಲಿ ಕ್ಷೀಣಿಸಿದ್ದ ಮಳೆ ಚುರುಕುಗೊಳ್ಳುವ ಸಾಧ್ಯತೆಗಳಿದ್ದು, ಕರಾವಳಿ ಭಾಗದಲ್ಲಿ ನಾಳೆ (ಗುರುವಾರ) ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್ ಆಲರ್ಟ್ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

ಈ ವೇಳೆ ಕರಾವಳಿ ಭಾಗದಲ್ಲಿ 115.6 ಮಿಲಿ ಮೀಟರ್ ನಿಂದ 204.4. ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ಈ ಭಾರೀಯ ಮುಂಗಾರು ಸಾಧಾರಣವಾಗಿತ್ತು. ಜೂನ್ 1 ರಿಂದ ಈ ವರೆಗೆ ದ.ಕ.ಜಿಲ್ಲೆಯಲ್ಲಿ 3,345.70 ಮಿಲಿ ಮೀಟರ್ ವಾಡಿಕೆಯ ಮಳೆಯಲ್ಲಿ 3, 265. 37 ಮಿಲಿ ಮೀಟರ್ ಮಳೆಯಾಗಿ ಶೇ. 2 ರಷ್ಟು ಮಳೆಯ ಕೊರತೆ ಇದೆ. ಒಟ್ಟಾರೆಯಾಗಿ ಕರಾವಳಿ ಭಾಗದಲ್ಲಿ ವಾಡಿಕೆಗಿಂತ 26 ರಷ್ಟು ಮಳೆಯ ಪ್ರಮಾಣ ಹೆಚ್ಚಳವಾಗಿದೆ. ಹವಾಮಾನ ಇಲಾಖೆ ವಾಡಿಕೆಯಂತೆ ಈ ತಿಂಗಳ ಅಂತ್ಯಕ್ಕೆ ಮುಂಗಾರು ಕೊನೆಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next