ಚೆನ್ನೈ : ತಮಿಳು ನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ (EPS) ಮತ್ತು ಓ ಪನ್ನೀರ ಸೆಲ್ವಂ(OPS) ನೇತೃತ್ವದ ಎಐಎಡಿಎಂಕೆ ಉಭಯ ಎದುರಾಳಿ ಬಣಗಳು ಇಂದು ಸೋಮವಾರ ತಮ್ಮ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ವಿಲಯನವನ್ನು ಅಧಿಕೃತವಾಗಿ ಪ್ರಕಟಿಸಿವೆ.
ವರದಿಗಳ ಪ್ರಕಾರ ಇಪಿಎಸ್ ಅವರು ಪಳನಿಸ್ವಾಮಿ ಅವರು ಮುಂದಿಟ್ಟ ಕೇಲವು ಬೇಡಿಕೆಗಳನ್ನು ಒಪ್ಪಿಕೊಳ್ಳುವುದರೊಂದಿಗೆ ಉಭಯ ಎದುರಾಳಿ ಬಣಗಳ ವಿಲಯನ ಮಾತುಕತೆಗೆ ಚುರುಕು ಲಭಿಸಿತು.
ಇಪಿಎಸ್ ಅವರು ಜಯಲಲಿತಾ ಅವರ ಸಾವಿನ ಬಗ್ಗೆ ತನಿಖಾ ಆಯೋಗವನ್ನು ನೇಮಿಸಿರುವರಲ್ಲದೆ ಜಯಲಲಿತಾ ಅವರ ಅಧಿಕೃತ ಪೋಯೆಸ್ ಗಾರ್ಡನ್ ನಿವಾಸ, ವೇದ ನಿಲಯಂ ಅನ್ನು ಶೀಘ್ರವೇ ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರ ಪ್ರಕಟಿಸಿದರು. ಆದರೆ ಜಯಾ ಅವರ ಸಾವಿನ ಸಿಬಿಐ ತನಿಖೆ ನಡೆಸಬೇಕೆಂಬ ಬೇಡಿಕೆಯ ಮೇಲೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ.
ಪಕ್ಷದ ಹಿರಿಯ ಸಚಿವರು ಮತ್ತು ಪದಾಧಿಕಾರಿಗಳೊಂದಿಗೆ ಇಂದು ಪನ್ನೀರ ಸೆಲ್ವಂ ಮತ್ತು ಪಳನಿ ಸ್ವಾಮಿ ಮಾತುಕತೆ ನಡೆಸಲಿದ್ದಾರೆ.
ಜೈಲು ಪಾಲಾಗಿರುವ ವಿ ಕೆ ಶಶಿಕಲಾ ಮತ್ತು ಆಕೆಯ ಕುಟುಂಬ ಸದಸ್ಯರನ್ನು ಪಕ್ಷದಿಂದ ಅಧಿಕೃತವಾಗಿ ಉಚ್ಚಾಟಿಸುವ ನಿರ್ಧಾರವನ್ನು ಇಂದು ಕೈಗೊಳ್ಳುವ ನಿರೀಕ್ಷೆ ಇದೆ. ಇದು ಒಪಿಎಸ್ ಬಣದ ಪ್ರಮುಖ ಶರತ್ತುಗಳಲ್ಲಿ ಒಂದಾಗಿದ್ದು ಅದಿನ್ನೂ ಪರಿಗಣಿತವಾಗಿಲ್ಲ.