Advertisement

ಮಾಲ್ಡೀವ್ಸ್‌ಗೆ ಇಬ್ರಾಹಿಂ ಅಧ್ಯಕ್ಷ

09:20 AM Sep 25, 2018 | Team Udayavani |

ಮಾಲೆ: ಭಾರತ ಮತ್ತು ಚೀನ ದೇಶಗಳು ಭಾರೀ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ, ಇತ್ತೀಚೆಗೆ ನಡೆದಿದ್ದ ಮಾಲ್ಡೀವ್ಸ್‌ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶ ಹೊರಬಿದ್ದಿದ್ದು, ಹಾಲಿ ಅಧ್ಯಕ್ಷ ಯಮೀನ್‌ ಅಬ್ದುಲ್‌ ಗಯೂಮ್‌ ವಿರುದ್ಧ ವಿಪಕ್ಷಗಳ ಒಮ್ಮತದ ಅಭ್ಯರ್ಥಿ ಇಬ್ರಾಹಿಂ ಮೊಹಮ್ಮದ್‌ ಸ್ವಾಲಿಹ್‌ ಅಚ್ಚರಿಯ ಜಯ ದಾಖಲಿಸಿದ್ದಾರೆ. ಯಮೀನ್‌ ವಿರುದ್ಧ ಅವರು 38,484 ಮತಗಳ ಅಂತರದ ಜಯಗಳಿಸಿದ್ದಾರೆ. ಫ‌ಲಿತಾಂಶವನ್ನು ಸ್ವಾಗತಿಸಿರುವ ಭಾರತ, ಇಬ್ರಾಹಿಂ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಇದು ಮಾಲ್ಡೀವ್ಸ್‌ನಲ್ಲಿರುವ ಪ್ರಜಾಪ್ರಭುತ್ವ ಶಕ್ತಿಗಳ ಜಯ ಎಂದು ಬಣ್ಣಿಸಿದೆ.

Advertisement

ಭಾರತಕ್ಕೇನು ಲಾಭ?: ಭಾರತ, ಮಾಲ್ಡೀವ್ಸ್‌ನ ಸಂಬಂಧ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿತ್ತು. ಇದಕ್ಕೆ ಕಾರಣ, ಹಿಂದಿನ ಅಧ್ಯಕ್ಷ ಯಮೀನ್‌ಮೇಲೆ ಚೀನಾ ಹೊಂದಿದ್ದ ಪ್ರಭಾವ. ನೆರೆರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ನಿರ್ಧರಿಸಿರುವ ಚೀನಾ, ಮೊದಲಿನಿಂದಲೂ ‘ಭಾರತವೇ ಮೊದಲು’ ಎಂಬ ವಿದೇಶಾಂಗ ನೀತಿ ಹೊಂದಿದ್ದ ಮಾಲ್ಡೀವ್ಸ್‌ನ ಈ ನಿಲುವನ್ನೇ ಬದಲಿಸಿ, ಆ ದೇಶವನ್ನು ಭಾರತದ ವಿರುದ್ಧ ಎತ್ತಿಕಟ್ಟಿತ್ತು. ಇದೇ ಫೆಬ್ರವರಿಯಲ್ಲಿ ಗಯೂಮ್‌ ಅವರು ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾಗ ಇದು ಮತ್ತಷ್ಟು ತಾರಕಕ್ಕೆ ಹೋಗಿತ್ತು.

ಇದೀಗ, ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ, ಯಮೀನ್‌ಗಿಂತಲೂ ಹಿಂದೆ ಅಧ್ಯಕ್ಷರಾಗಿದ್ದ ನಶೀದ್‌ರಂತೆ ಭಾರತದ ಪರ ನಿಲುವು ಹೊಂದಿರುವುದು ಭಾರತಕ್ಕೆ ಹೊಸ ಆಶಾಕಿರಣವಾಗಿದೆ. ಆದರೂ, ತನ್ನ ಕೈಗೊಂಬೆಯಾಗಿದ್ದ ಯಮೀನ್‌ ಸೋಲಿನಿಂದ ಹತಾಶಗೊಂಡಿರುವ ಚೀನಾ, ಮಾಲ್ಡೀವ್ಸ್‌ನಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಸಲು ಯತ್ನಿಸಬಹುದೆಂಬ ಭೀತಿಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next