ಹಾಸನ: ಹಾಸನ-ಸಕಲೇಶಪುರ-ಮಾರನಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ-75ರ ಚತುಷ್ಪಥ ರಸ್ತೆ ನಿರ್ಮಾಣ ಅವೈಜ್ಞಾನಿಕವಾಗಿ ನಡೆಯುತ್ತಿರುವುದನ್ನು ಖಂಡಿಸಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಬೆಳಗೋಡು ಬಸವರಾಜು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ – ಸಕಲೇಶಪುರ – ಮಾರನಹಳ್ಳಿ ನಡುವಿನ ಸುಮಾರು 45 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮ ಗಾರಿ ಕಳೆದ 6 ವರ್ಷ ಗಳಿಂದ ನಡೆಯುತ್ತಿದೆ.ಆದರೂ,ಯಾವಾಗ ಪೂರ್ಣವಾ ಗುವುದು ಎಂಬುದು ಮಾತ್ರ ಗೊತ್ತಿಲ್ಲ. ರಸ್ತೆ ನಿರ್ಮಾಣ ಅಸಮರ್ಪಕ, ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕಾಮಗಾರಿ ಕಳಪೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಸಂಬಂಧಪಟ್ಟವರು ಸರಿಪಡಿಸುವ ಹಾಗೂ ಕಾಮಗಾರಿ ಚುರುಕುಗೊಳಿಸುವ ಪ್ರಯತ್ನ ನಡೆಸಿಲ್ಲ.ಹಾಗಾಗಿ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಅಪಘಾತಕ್ಕೆ ಹೊಣೆ ಯಾರು?: ರಾಜ್ಯ ಹೆದ್ದಾರಿಯಿಂದ ಚಲಿಸುವ ವಾಹನವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ನಡುವೆ ಅಪಘಾತ ಸಂಭಸಿದರೆ ಇದಕ್ಕೆ ಹೊಣೆ ಹೊರುವವರು ಯಾರು? ಇಂತಹ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಗೆ ನಕ್ಷೆ ತಯಾರಿಸಿದ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಅವರ ವೈಯುಕ್ತಿಕ ಹಣದಿಂದಲೇ ಉಂಟಾಗಿರುವ ನಷ್ಟವನ್ನು ಅಂದರೆ ಅಂಡರ್‌ಪಾಸ್ ಅಥವಾ ವೃತ್ತವನ್ನು ನಿರ್ಮಿಸುವ ಕಾಮಗಾರಿ ನಿರ್ಮಿಸಲು ಉಂಟಾಗುವ ವೆಚ್ಚವನ್ನು ಎಂಜಿನಿಯರ್ ಅವರೇ ಭರಿಸಬೇಕು ಎಂದು ಆಗ್ರಹಿಸಿದರು.
ತಂಗುದಾಣ ನಿರ್ಮಿಸಿ: ಬಾಗೆಯಿಂದ ದಿನನಿತ್ಯ ಸಾವಿರಾರು ಜನ ಬೆಂಗಳೂರು ಹಾಗೂ ಮಂಗಳೂರಿಗೆ ಪ್ರಯಾ ಣಿಸುತ್ತಿರುತ್ತಾರೆ. ಮಲೆನಾಡು ಭಾಗವಾಗಿರುವು ದರಿಂದ ಅತಿ ಹೆಚ್ಚು ಮಳೆಯೂ ಸುರಿಯುತ್ತದೆ. ಆದ್ದರಿ ಂದ ಪ್ರಯಾಣಿಕರಿಗೆ ರಸ್ತೆಯ 2 ಬದಿಗಳಲ್ಲಿ ಬಸ್ ತಂಗುದಾ ಣವನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಕುಸಿದ ರಸ್ತೆ, ಮೋರಿ: ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡಿರುವ ಸ್ಥಳಗಳಲ್ಲಿ ರಸ್ತೆಗೆ ನಿರ್ಮಿಸಿರುವ ಪೈಪ್, ಕಲ್ಬರ್ಟ್‌ಗಳನ್ನು ಹಾಕಿ ನಿರ್ಮಿಸಿರುವ ಮೋರಿಗಳು ಕೆಳಗೆ ರಸ್ತೆ ಸಮೇತ ಕುಸಿದಿದೆ. ಅಂತಹ ಸ್ಥಳದಲ್ಲಿ ಮತ್ತೆ ರಸ್ತೆ ಮೇಲೆಯೇ ಕಾಂಕ್ರಿಟ್ ಸುರಿದು ರಸ್ತೆಗೆ ಉಬ್ಬು ನಿರ್ಮಿಸಿದಂತಾಗಿ, ಈ ಸ್ಥಳಗಳನ್ನು ದ್ವಿ-ಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಸಾಧ್ಯತೆ ಇದೆ. ಇಂತಹ ಸ್ಥಳಗಳನ್ನು ಪರಿಶೀಲಿಸಿ ಸರಿಪಡಿಸಬೇಕು. ವೈಜ್ಞಾನಿಕ ತಡೆಗೋಡೆ ನಿರ್ಮಿಸಿ: ರಸ್ತೆ ನಿರ್ಮಾಣವಾ ಗಿರುವ ಕೆಲವು ಸ್ಥಳಗಳಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಇಂತಹ ಸ್ಥಳಗಳಲ್ಲಿ ರಸ್ತೆ ಸರಿಪಡಿಸಬೇಕು. ಈಗಾಗಲೇ ಅವೈಜ್ಞಾನಿಕವಾಗಿ ನಿರ್ಮಿಸಿರುವ ತಡೆಗೋಡೆಗಳನ್ನು ಹೊಸದಾಗಿ ವೈಜ್ಞಾನಿಕವಾಗಿ ನಿರ್ಮಿ ಸಬೇಕು. ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಅಂಡರ್ ಪಾಸ್ ಅಥವಾ ಸರ್ಕಲ್ ನಿರ್ಮಿಸುವ ಕಾಮಗಾರಿ ಕೂಡಲೇ ಕೈಗೊಳ್ಳಬೇಕು. ಸಾಮಾಜಿಕ ಹೋರಾಟಗಾರ ಜಾನ್ ಹೆ ದಲಿತ ಮುಖಂಡ ನಾಗರಾಜು ಹೆತ್ತೂರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಟನೆ ದಿನಾಂಕ ಘೋಷಣೆ ಶೀಘ್ರ : ಜ.3ರಂದು ಸಂಘಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಚರ್ಚಿಸಿ ಪ್ರತಿಭಟನೆ ಆರಂಭದ ದಿನಾಂಕವನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75ರ ಕಾಮಗಾರಿಯೂ 6 ವರ್ಷಗಳಿಂದ ಪೂರ್ಣಗೊಳಿಸದೇ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಆಮೆ ನಡಿಗೆಯಲ್ಲಿ ನಿರ್ವಹಿಸುತ್ತಿದ್ದು, ಇದರಿಂದ ಅನೇಕ ವಾಹನ ಸವಾರ ರಿಗೆ, ರೋಗಿಗಳಿಗೆ, ಆ್ಯಂಬುಲೆನ್ಸ್ ವಾಹನಗಳಿಗೆ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಇದರ ನಡುವೆ ರಾಜ್ಯ ಹೆದ್ದಾರಿ ರಾ ಷ್ಟ್ರೀಯ ಹೆದ್ದಾರಿ-75ಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸ್ಥಳವಾದ ಬಾಗೆ ಗ್ರಾಮದ ಬಳಿ ಅಂಡರ್ ಪಾಸಿಂಗ್ ಇಲ್ಲದೇ ಅಥವಾ ಸರ್ಕಲ್ ನಿರ್ಮಿಸದೆ ಕಾಮಗಾರಿ ನಡೆಯುತ್ತಿದೆ ಎಂದು ಬೆಳಗೋಡು ಬಸವರಾಜು ಆತಂಕ ವ್ಯಕ್ತಪಡಿಸಿದರು.