Advertisement

ಅವೈಜ್ಞಾನಿಕ ಕಟ್ಟಡಕ್ಕೆ ವಿರೋಧ

12:01 PM Jan 25, 2020 | Suhan S |

ಜಮಖಂಡಿ: ನೂತನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಅವೈಜ್ಞಾನಿಕ ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ದಿ| ಸಿದ್ದು ನ್ಯಾಮಗೌಡರು ಸಿಂಗಾಪೂರ ಮಾದರಿಯಲ್ಲಿ ಬಸ್‌ ನಿರ್ಮಾಣಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದು, ಬಸ್‌ ನಿಲ್ದಾಣದ ಪ್ರಮುಖ ಸ್ಥಳದಲ್ಲಿ ನೀರಿನ ಟ್ಯಾಂಕ್‌ ಕಟ್ಟಲು ಮುಂದಾಗಿದೆ.

Advertisement

ಈ ಬಗ್ಗೆ ಸ್ಥಳೀಯ ಘಟಕದ ಅಧಿಕಾರಿಗಳಿಗೆ ಹಾಗೂ ನಗರದ ಪ್ರಮುಖರ ಗಮನಕ್ಕೂ ಬಾರದೇ ಬೇಕಾಬಿಟ್ಟಿ ಕಾಂಕ್ರೀಟ್‌ ರಸ್ತೆಯನ್ನು ಹಡ್ಡಿ ಹಾಳು ಮಾಡಲಾಗುತ್ತಿದೆ. ನಿಲ್ದಾಣದ ಮಧ್ಯಭಾಗದಲ್ಲೇ ನೀರಿನ ಟ್ಯಾಂಕ್‌ ನಿರ್ಮಿಸುವುದರಿಂದ ಹೊಸದಾಗಿ ಕಟ್ಟಿದ ಕಟ್ಟಡಕ್ಕೆ ಧಕ್ಕೆ ಆಗಲಿದೆ. ರಸ್ತೆಯಲ್ಲಿ ನೀರು ಹರಿದಾಡುವುದರಿಂದ ವಾಹನ ಹಾಗೂ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತದೆ ಎಂದು ಆರೋಪಿಸಲಾಗಿದೆ.

ಮಳೆ ಬಂದರೆ ಕೆರೆ: ಭಾರಿ ಮಳೆ ಬಂದರೆ ಬಸ್‌ ನಿಲ್ದಾಣದಲ್ಲಿ ಸಣ್ಣದೊಂದು ಕೆರೆ ನಿರ್ಮಾಣವಾಗುತ್ತದೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಈ ಟ್ಯಾಂಕ್‌ದಲ್ಲಿ ಮಳೆನೀರು, ಗಟಾರ ನೀರು ಸೇರಿ ರೋಗ-ರುಜಿಣಿ ಹರಡುವ ಸಾಧ್ಯತೆ ಇದೆ. ಬಸ್‌ ನಿಲ್ದಾಣದಲ್ಲಿ ಈಗಾಗಲೇ ಸಾಕಷ್ಟು ಗಲೀಜು ನೀರು ನಿಂತು ಸಂಚಾರಕ್ಕೆ ಅಡಚಣೆ ಆಗಲಿದೆ. ಕಾಮಗಾರಿ ಕೂಡಲೇ ನಿಲ್ಲಿಸದಿದ್ದರೆ ಬಸ್‌ ನಿಲ್ದಾಣದಲ್ಲಿ ಉಗ್ರ ಹೋರಾಟ ನಡೆಸಿ, ರಸ್ತಾ ರೋಕೋ ಚಳವಳಿ ನಡೆಸುವುದಾಗಿ ನಗರಸಭೆ ಸದಸ್ಯರಾದ ದಾನೇಶ ಘಾಟಗೆ, ಪರಮಾನಂದ ಗೌರೋಜಿ, ಮಹಾದೇವ ಕಲೂತಿ, ಅಬುಬಕರ ಕುಡಚಿ, ಪುಟ್ಟು ಪಾನಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next