ಕುದೂರು: ಪಟ್ಟಣದ ನಿಶಬ್ದ ನಗರದಲ್ಲಿ ಇಲಾಖೆ ಪರವಾನಗಿ ಇಲ್ಲದೇ ಭೂ ಪರಿವರ್ತನೆ ಮಾಡಿಸದೇ ಅನಧಿಕೃತ ಕೈಗಾರಿಕಾ ಶೆಡ್ ನಿರ್ಮಾಣವಾಗುತ್ತಿದ್ದರೂ, ಕುದೂರು ಗ್ರಾಪಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಕೆ .ಬಿ ಚಂದ್ರಶೇಖರ್ ಕುದೂರು ಗ್ರಾಪಂ ವಿರುದ್ಧ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುದೂರು ಗ್ರಾಪಂ ವ್ಯಾಪ್ತಿಯ ನಿಶಬ್ದನಗರದಲ್ಲಿ ಬೆಂಗಳೂರಿನ ಖಾಸಗಿ ವ್ಯಕ್ತಿ ಈಗಾಗಲೇ ಅನಧೀಕೃತವಾಗಿ ಎಸ್.ಎಲ್.ಆರ್ ಎಂಬ ಕೈಗಾರಿಕೆ ನಡೆಸುತ್ತಿದ್ದು, ಅದನ್ನು ತೆರೆಯಲು ಸಣ್ಣ ಕೈಗಾರಿಕೆ ಇಲಾಖೆ ಅಥವಾ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅಲ್ಲದೆ, ಪಕ್ಕದಲ್ಲೇ ಮತ್ತೊಂದು ಕೈಗಾರಿಕೆ ಪ್ರಾರಂಭಿಸಲು ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಮಾಲೀಕರು ಮುಂದಾಗಿದ್ದು, ಗ್ರಾಪಂಗೆ ಅನಧಿಕೃತ ಕೈಗಾರಿಕೆ ಶೆಡ್ ನಿರ್ಮಾಣ ತಡೆಗೆ ಅರ್ಜಿಸಲ್ಲಿಸಿದ್ದು, ಗ್ರಾಪಂ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ನೀಡಿ, ಕಾಮಗಾರಿಯನ್ನು ನಿಲ್ಲಿಸದಿದ್ದರೆ ಗ್ರಾಪಂ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಭಾರತದಲ್ಲಿ 2ನೇ ಡೋಸ್ ಬಳಿಕ 87 ಸಾವಿರ ಕೋವಿಡ್ ಸೋಂಕು ಪ್ರಕರಣ ಪತ್ತೆ: ವರದಿ
ಜಿಪಂ ಮಾಜಿ ಅಧ್ಯಕ್ಷರಿಂದ ಪತ್ರ: ಈಗಾಗಲೇ ಕುದೂರಿನ ಸರ್ವೆ ನಂ.62/4 ಮತ್ತು 62/5ರಲ್ಲಿ ಎಸ್‌ಎಲ್‌ಆರ್ ಶೀಟ್ ಫ್ಯಾಕ್ಟರಿ ನಡೆಸಲು ಜನರಲ್ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾಗ, ಈ ಹಿಂದೆ ಇದ್ದ ಪಿಡಿಒ ಲೈಸನ್ಸ್ ನೀಡಲು ಸಾಧ್ಯವಿಲ್ಲ ಎಂದಾಗ, ಅಂದಿನ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಗ್ರಾಪಂ ಸದಸ್ಯರು ಗ್ರಾಪಂಗೆ ಸಂಪನ್ಮೂಲ ಕ್ರೋಢಿಕರಣ, ಕೈಗಾರಿಕೆ ಬೆಳೆವಣಿಗೆ ಎಂಬ ಕುಂಟುನೆಪವೊಡ್ಡಿ ಪಿಡಿಒ ಮೇಲೆ ಒತ್ತಡ ಹೇರಿ ಕಾನೂನು ಬಾಹಿರವಾಗಿ ಜನರಲ್ ಲೈಸನ್ಸ್ ನೀಡಿದ್ದರೂ, ಈ ಸಂಬಂಧ ರಾಮನಗರ ಜಿಪಂ ಅಧ್ಯಕ್ಷರಾದ ಎಚ್.ಎನ್.ಅಶೋಕ್ ಕಾನೂನು ಬಾಹಿರವಾಗಿ ಅನಧಿಕೃತವಾಗಿ ನಡೆಸುತ್ತಿರುವ ಎಸ್.ಎಲ್. ಆರ್ ಶೀಟ್ ಫ್ಯಾಕ್ಟರಿಯಾ ಸರ್ವೆ ನಂಗೆ ನೀಡಿರುವ ಡಿಮ್ಯಾಂಡ್ ರಿಜಿಸ್‌ರ್ ಹಾಗೂ ಎನ್‌ಒಸಿ ರದ್ದುಗೊಳಿಸಬೇಕು ಎಂದು ಗ್ರಾಪಂಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ದಯಾನಂದ್ ಆರೋಪಿಸಿದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ನರಸಿಂಹಮೂರ್ತಿ, ಹೇಮಾ ಚಂದ್ರಬಾಬು, ರಂಗನಾಥ್ ಹಾಜರಿದ್ದರು.
ಈಗಾಗಲೇ ಲೈಸನ್ಸ್ ನೀಡಿದೆ. ನಾವು ಕಟ್ಟಡ ಕಟ್ಟಿಕೊಳ್ಳುತ್ತಿದ್ದೇವೆ. ಆನಂತರ ಪಂಚಾಯಿತಿಗೆ ಏನು ನೀಡಬೇಕು ಅವನ್ನು ನೀಡಿ,ಕಟ್ಟಡ
ಆರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.
-ಲೋಕೇಶ್, ಪಿಡಿಒ, ಕುದೂರು ಗ್ರಾಪಂ