“ಅಲ್ಪಸಂಖ್ಯಾತ ಸಮುದಾಯದ ಮುಖಂಡರು’ ಎಂದು ಕರೆದಿದ್ದಕ್ಕೆ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಆಕ್ಷೇಪ
ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
Advertisement
ಸಭಾಪತಿಗಳು ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಬಳಿಕ ಈ ಕುರಿತು ಪ್ರಸ್ತಾಪಿಸಿದ ಇಬ್ರಾಹಿಂ, ಈ ಹಿಂದೆ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಸಂತಾಪ ಸೂಚನಾ ನಿರ್ಣಯದಲ್ಲೂ ಅವರನ್ನು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಎಂದು ಹೇಳಲಾಗಿತ್ತು. ಈಗ ಮುಕ್ತರುನ್ನಿಸಾ ಬೇಗಂ ಅವರಿಗೂ ಅದೇ ರೀತಿ ಬರೆಯಲಾಗಿದೆ. ಇದು ಸರಿಯಲ್ಲ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ದುಡಿದ ಅಲ್ಪಸಂಖ್ಯಾತರನ್ನು ಅವರ ಜಾತಿಗೆ ಮಾತ್ರ ಸೀಮಿತಗೊಳಿಸುವ ಪದ್ಧತಿ ನಿಲ್ಲಬೇಕು. ನಾಳೆ ದಿನ ನಾನು ಸತ್ತಾಗಲೂ ಇದೇ ಸ್ಥಿತಿ ಬರಬಹುದು ಎಂಬ ಕಾರಣಕ್ಕೆ ಇಷ್ಟೊಂದು ಒತ್ತಿ ಹೇಳುತ್ತಿದ್ದೇನೆ ಎಂದರು.
ನಾಯಕ ಕೆ.ಎಸ್ ಈಶ್ವರಪ್ಪ, “ಇಬ್ರಾಹಿಂ ಸಾಹೇಬ್ರೆ, ನಿಮ್ಮ ಸಂತಾಪ ಸೂಚನೆ ಮಂಡಿಸಲು ದಯವಿಟ್ಟು ಅವಕಾಶ ಕೊಡಬೇಡಿ. ಸಂತಾಪ ಸೂಚಿಸುವ ಸಂದರ್ಭ ನನಗಂತೂ ಬಾರದಿರಲಿ ಎಂದು ಭಗವಂತಲ್ಲಿ ಪ್ರಾರ್ಥಿಸುತ್ತೇನೆ. ಅಷ್ಟಕ್ಕೂ ನೀವು ಸತ್ತ ಮೇಲೆ ಯಾರೂ ನಿಮ್ಮನ್ನು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಎಂದು ಕರೆಯಲ್ಲ ಬಿಡಿ ಎಂದು. ಇದಕ್ಕೆ ಕೆಲಸ ಸದಸ್ಯರು ಅವರು ಬಸವಣ್ಣನ ಅಭಿಮಾನಿ ಎಂದರು. “ಸಾವಿನಲ್ಲಾದರೂ ಸಮಾನತೆ ಕೊಡಿ’ ಎಂದು ಇಬ್ರಾಹಿಂ ಅವರು ಕೇಳುತ್ತಿದ್ದಾರೆ ಎಂದು ಜೆಡಿಎಸ್‌ನ ಬಸವರಾಜ್ ಹೊರಟ್ಟಿ ಮಾರ್ಮಿಕವಾಗಿ ಹೇಳಿದರು. ಹೌದು, ಈ ರೀತಿ ಆಗಬಾರದು ಮುಂದೆ ಸಂತಾಪ ಸೂಚನಾ ನಿರ್ಣಯ ಮಂಡಿಸುವಾಗ ಇಂತಹ ವಿಚಾರಗಳನ್ನು ಗಮನಿಸಲಾಗುವುದು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಚರ್ಚೆಗೆ ತೆರೆ ಎಳೆದರು.