Advertisement

ಕೃಷಿ ವಿಸ್ತರಣಾ ಕೇಂದ್ರ ಸ್ಥಳಾಂತರಕ್ಕೆ ವಿರೋಧ

04:58 PM Feb 16, 2021 | Team Udayavani |

ಮುದ್ದೇಬಿಹಾಳ: ಈ ತಾಲೂಕಿಗೆ 4-5 ವರ್ಷಗಳ ಹಿಂದೆ ಮಂಜೂರಾಗಿದ್ದ ಕೃಷಿ ಸಂಶೋಧನಾ ಕೇಂದ್ರವನ್ನು ಇಲ್ಲಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲು ಸ್ಥಳೀಯ ಶಾಸಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿರುವ ಎ.ಎಸ್‌. ಪಾಟೀಲ ನಡಹಳ್ಳಿ ಅವರ ಮುಂದಾಳತ್ವದಲ್ಲೇ ಪ್ರಯತ್ನ ನಡೆಸಲು ಪ್ರಗತಿಪರರು, ರೈತ ಸಂಘಟನೆಗಳ ಮುಖಂಡರು ತೀರ್ಮಾನಿಸಿದರು.

Advertisement

ಪಟ್ಟಣದ ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿಮಾತನಾಡಿದ ಮುಖಂಡರು, ಸ್ಥಳೀಯ ಶಾಸಕರು ಬಿಜೆಪಿಯವರೇ ಆಗಿದ್ದು ಆಡಳಿತದಲ್ಲಿರುವ ಸರ್ಕಾರದ ಭಾಗವೇ ಆಗಿದ್ದಾರೆ.ಮೇಲಾಗಿ ಅವರು ರೈತಪರ ಕಾಳಜಿ, ಕಳಕಳಿ ಹೊಂದಿದವರಾಗಿದ್ದಾರೆ.ಹೀಗಾಗಿ ಕೇಂದ್ರದ ಕುರಿತು ಅವರಗಮನಕ್ಕೆ ತಂದು, ಅದರ ಅವಶ್ಯಕತೆಮನವರಿಕೆ ಮಾಡಿಕೊಟ್ಟು ಕೃಷಿ ಸಚಿವರು, ಮುಖ್ಯಮಂತ್ರಿಗಳಮನವೊಲಿಸಿ ಆ ಕೇಂದ್ರವನ್ನು ಇಲ್ಲಿಗೇ ತರುವಲ್ಲಿ ಎಲ್ಲರೂ ಶಾಸಕರ ಜೊತೆ ಕೈಜೋಡಿಸಬೇಕು. ಇದಕ್ಕಾಗಿಫೆ. 18ರಂದು ರೈತರ ನಿಯೋಗ ಶಾಸಕರನ್ನು ಭೇಟಿ ಮಾಡಬೇಕುಎಂದು ತೀರ್ಮಾನಿಸಲಾಯಿತು.

ಈ ವೇಳೆ ಬಸರಕೋಡದ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷಅರವಿಂದ ಕೊಪ್ಪ ಮಾತನಾಡಿ, ಹಿಂದಿನಶಾಸಕ ಸಿ.ಎಸ್‌. ನಾಡಗೌಡರ ಅವಧಿಯಲ್ಲಿ ಕೇಂದ್ರವು ಮುದ್ದೇಬಿಹಾಳತಾಲೂಕಿಗೆ ಮಂಜೂರಾಗಿತ್ತು.ಆ ಬಗ್ಗೆ 2018ರ ಬಜೆಟ್‌ನಲ್ಲೂ ಘೋಷಣೆಯಾಗಿ 1 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ನಂತರದಲ್ಲಿ ಕೆಲವು ಪಟ್ಟಭದ್ರರ ಚಿತಾವಣೆಯಿಂದಾಗಿ ನಾಡಗೌಡರು ಉತ್ಸಾಹ ಕಳೆದುಕೊಂಡುಕ್ರಿಯಾಶೀಲರಾಗಿ ಕೇಂದ್ರ ಇಲ್ಲಿಗೆ ತರಲು ಕೆಲಸ ಮಾಡಲಿಲ್ಲ. ಹೀಗಾಗಿ ಈ ತಾಲೂಕಿನ ರೈತರು ಕೇಂದ್ರದ ಪ್ರಯೋಜನದಿಂದ ವಂಚಿತರಾಗಬೇಕಾಯಿತು ಎಂದರು.

ವಿಜಯಪುರದ ಹಿಟ್ನಳ್ಳಿ ಫಾರ್ಮ್ ನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮೂರೂ ಒಂದೇ ಸ್ಥಳದಲ್ಲಿವೆ. ಭಾರತೀಯ ಕೃಷಿ ಅನುಸಂಧಾನಪರಿಷತ್‌ ನಿಯಮದ ಪ್ರಕಾರ ಒಂದೇ ಉದ್ದೇಶ ನೆರವೇರಿಸುವ ಕೇಂದ್ರಗಳುಒಂದೇ ಜಾಗೆಯಲ್ಲಿ ಇರಬಾರದು. ಇದನ್ನು ಮನಗಂಡೇ ಆಗಿನ ಶಾಸಕನಾಡಗೌಡರ ಪ್ರಸ್ತಾವನೆ ಮೇರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದವ್ಯವಸ್ಥಾಪಕ ಮಂಡಳಿಯಲ್ಲಿ ಚರ್ಚೆ ನಡೆದು ಕೇಂದ್ರ ಸ್ಥಳಾಂತರದ ಆದೇಶ ಹೊರಡಿಸಲಾಗಿತ್ತು ಎಂದರು.

ಆದರೆ ಕೇಂದ್ರದಲ್ಲಿರುವ ಕೆಲವು ಪಟ್ಟಭದ್ರ ವಿಜ್ಞಾನಿಗಳು ಮುದ್ದೇಬಿಹಾಳಕ್ಕೆ ಬಂದುಸೇವೆ ಕೊಡುವುದು ಕಷ್ಟಕರ ಎಂದು ತಿಳಿದು ಚಿತಾವಣೆ ನಡೆಸಿ ತಮಗೆ ಬೇಕಾದ ಕೆಲವು ರೈತರಿಂದ ಸ್ಥಳಾಂತರ ವಿರೋಧಿಸುವ ಹೇಳಿಕೆಕೊಡಿಸಿದ್ದರು. ಇದರಿಂದ ಗೊಂದಲ ಉಂಟಾಗಿ ನಾಡಗೌಡರು ತಟಸ್ಥರಾದರು. ಆಗ ರೈತರೂಪ್ರತಿಭಟಿಸಲಿಲ್ಲ. ಇದರಿಂದ ಸ್ಥಳಾಂತರಪ್ರಕ್ರಿಯೆ ತಟಸ್ಥಗೊಂಡಿತು. ಆದರೆ ಇಡೀ ಪ್ರಸ್ತಾವನೆ ಇನ್ನೂ ರದ್ದಾಗಿಲ್ಲ. ಅದು ಜೀವಂತ ಇದೆ. ಅದಕ್ಕೆ ಮತ್ತೇ ಜೀವ ತುಂಬಬೇಕಿದೆ ಎಂದರು.

Advertisement

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರವಕೀಲರು, ಪ್ರಮುಖರಾದ ಅಮೀರ್‌ ನಂದವಾಡಗಿ, ಬಾಬು ಬಿರಾದಾರ, ರಾಜಶೇಖರ ಚಿರ್ಚನಕಲ್‌, ಕೆ.ಬಿ.ದೊಡಮನಿ ವಕೀಲರು, ಉಮೇಶ ಆಲಕೊಪ್ಪರ ನಾಲತವಾಡ, ಅರುಣ ಪಾಟೀಲ,ನಿಂಗಣ್ಣ ಪೂಜಾರಿ, ಅಗಸಬಾಳದಬಸನಗೌಡ ಪಾಟೀಲ ಮಾತನಾಡಿ, ಏನೇ ಬಂದರೂ ಕೇಂದ್ರ ಇಲ್ಲಿಗೆ ಸ್ಥಳಾಂತರಗೊಳ್ಳುವವರೆಗೂ ನಿರಂತರಹೋರಾಟ ಜಾರಿಯಲ್ಲಿಡಬೇಕು. ಇದರ ಮೊದಲ ಹಂತವಾಗಿ ಸ್ಥಳೀಯ ಶಾಸಕರ ಮನವೊಲಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಶಾಸಕರ ಬಳಿ ನಿಯೋಗ ಹೋಗಬೇಕು. ಶಾಸಕರ ಮೂಲಕವೇ ಕೃಷಿ ಸಚಿವರು, ಕೃಷಿ ವಿವಿ ಕುಲಪತಿ ಮುಂತಾದವರನ್ನು ಮಾತನಾಡಿಸಬೇಕು. ಶಾಸಕರನ್ನು ಮುಂದಿಟ್ಟುಕೊಂಡೇ ಈ ಕೆಲಸಮಾಡಬೇಕು ಎಂದು ಒಕ್ಕೊರಲಿನ ನಿರ್ಣಯ ಪ್ರಸ್ತಾಪಿಸಿದರು. ಎಸ್‌.ಕೆ.ಘಾಟಿ, ಬಾಬು ನದಾಫ್‌,ದಾನಯ್ಯ ಹಿರೇಮಠ ಸೇರಿದಂತೆ60-70 ರೈತರು, ಪ್ರಗತಿಪರರು,ವಿವಿಧ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next