Advertisement

ಮೋಟಾರು ವಾಹನ ಕಾಯ್ದೆಗೆ ವಿರೋಧ

10:29 AM Sep 25, 2019 | Team Udayavani |

ಬೈಲಹೊಂಗಲ: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದಿಂದ ಉಪವಿಭಾಗಾ ಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ಇದಕ್ಕೂ ಮೊದಲು ಕೇಂದ್ರ ಬಸ್‌ನಿಲ್ದಾಣದ ಕರೆಮ್ಮದೇವಿ ದೇವಸ್ಥಾನದಿಂದ ಆರಂಭವಾದ ಬೃಹತ್‌ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಎಸಿ ಕಚೇರಿಗೆ ತೆರಳಿತು. ನಂತರ ಉಕ ಅಟೋ ಚಾಲಕರ ಒಕ್ಕೂಟದ ಗೌರವಾಧ್ಯಕ್ಷ ರಫೀಕ ಬಡೇಘರ ಮಾತನಾಡಿ, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆಯು ಅವಿಜ್ಞಾನಿಕವಾಗಿದ್ದು, ಮೀತಿ ಮೀರಿದ ದಂಡದಿಂದ ಜನಸಾಮಾನ್ಯರು ಪರಿತಪಿಸುವಂತಾಗಿದೆ ಎಂದರು.

ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಜಯ ಕರ್ನಾಟಕ ತಾಲೂಕಾಧ್ಯಕ್ಷ ವಿಠuಲ ಹಂಪಿಹೊಳಿ ಮಾತನಾಡಿ, ವಾಹನ ಸವಾರರಿಗೆ ಗುಣಮಟ್ಟದ ರಸ್ತೆಗಳನ್ನು ಒದಗಿಸಿ ಕಾನೂನು ರೂಪಿಸಬೇಕಾದ ಸರ್ಕಾರ ಬೇಕಾಬಿಟ್ಟಿ ಮಿತಿ ಮೀರಿದ ದಂಡ ವಸೂಲಾತಿ ಕಾನೂನು ಜಾರಿಗೆ ತಂದಿರುವದರಿಂದ ಜನಸಾಮಾನ್ಯ ನರಳುವಂತಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಅಕಾಲಿಕ ಮಳೆಗೆ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡ ಜನರಿಗೆ ಸರ್ಕಾರದಿಂದ

ಇನ್ನೂ ಯಾವುದೇ ಹಣ ಬಿಡುಗಡೆಗೊಂಡಿಲ್ಲ. ಅಲ್ಲದೆ ಮಳೆಯಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರರಾದವರ ಬಳಿ ಯಾವುದೇ ವಾಹನ ದಾಖಲೆ ಪತ್ರಗಳು ಇಲ್ಲ. ಇಂತಹ ಸಂದರ್ಭದಲ್ಲಿ ಮಿತಿಮೀರಿದ ದಂಡ ಆಕರಣೆಗೆ ಸರ್ಕಾರ ಮುಂದಾಗಿರುವ ಕ್ರಮ ಸರಿಯಾದುದಲ್ಲ ಎಂದು ಆರೋಪಿಸಿದರು.

ಈ ವೇಳೆ ಎನ್‌.ಬಿ.ಪಾಟೀಲ, ಪಕ್ರುಸಾಬ ಕುಸಲಾಪೂರ, ಶ್ರೀಶೈಲ ಹಂಪಿಹೊಳಿ, ಮಡಿವಾಳಪ್ಪ ಹೋಟಿ, ರಾಜು ಬೋಳಣ್ಣವರ, ಪರಶುರಾಮ ರಾಯಭಾಗ, ಇಸ್ಮಾಯಿಲ್‌ ಬಡೇಘರ, ಹನೀಪ ಮುಜಾವರ, ಮಹ್ಮದಲಿ ಬಾಗೇವಾಡಿ, ಈರಯ್ಯ ತಿಪ್ಪಯ್ಯನ್ನವರ, ಉಳವಪ್ಪ ಅಂಗಡಿ, ಮೆಹತಾಬ ಕುದ್ದನ್ನವರ, ಶಿವಾನಂದ ಕುಲಕರ್ಣಿ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next