Advertisement

ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ

07:20 PM Nov 18, 2020 | Suhan S |

ಬೆಳಗಾವಿ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರವೇ (ಶಿವರಾಮೇಗೌಡ ಬಣ) ಕಾರ್ಯಕರ್ತರು ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಮರಾಠಾ ಸಮಾಜದ ಜನ ಇದ್ದಾರೆಂಬ ಕಾರಣಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚಿಸುವುದು, 50 ಕೋಟಿ ರೂ. ಅನುದಾನ ನೀಡುವುದು ನ್ಯಾಯಸಮ್ಮತವಲ್ಲ. ನಾಡಿನಲ್ಲಿ ಬೇರೆ ಬೇರೆ ರಾಜ್ಯಗಳ ಜನರು ಇದ್ದಾರೆ.ಅವರಿಗೆ ಮಣೆ ಹಾಕಿ ಕನ್ನಡಿಗರನ್ನು ಕೀಳಾಗಿ ಕಾಣುವುದು ಸರಿಯಲ್ಲ ಎಂದು ಆರೋಪಿಸಿದರು.

ಕನ್ನಡ ನೆಲದಲ್ಲೇ ಇರುವ ಇಲ್ಲಿನ ಪಾಲಿಕೆಯ ಕಟ್ಟಡದ ಮೇಲೆ ಕನ್ನಡಬಾವುಟ ಹಾರಿಸಲು ಅವಕಾಶ ನೀಡದ ಸರ್ಕಾರ ಈಗ ಮರಾಠರ ಓಲೈಕೆಗೆಮುಂದಾಗಿರುವುದು ಎಷ್ಟು ಸರಿ. ಸರ್ಕಾರ ಇಂಥ ದ್ವಿಮುಖ ನೀತಿ ಅನುಸರಿಸುವುದು ಬೇಡ ಎಂದುಹೇಳಿದರು. ಜಿಲ್ಲಾ ಘಟಕ ಅಧ್ಯಕ್ಷ ವಾಜಿದ ಅಹಮದ ಹಿರೇಕೋಡಿ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರಾಧಿಕಾರದಿಂದ ಮರಾಠಾ ಸಮಾಜಕ್ಕೆ ಅನುಕೂಲ :

ಸಂಬರಗಿ: ರಾಜ್ಯದಲ್ಲಿ ಮರಾಠಾ ಸಮಾಜದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಅಭಿವೃದ್ಧಿಯಿಂದ ಹಿಂದುಳಿದಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜವಳಿ ಹಾಗೂ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಹಾಗೂ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ಅವರ ಸತತ ಪ್ರಯತ್ನದಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮರಾಠಾ ಅಭಿವೃದ್ಧಿ ಪ್ರಾಧಿಕಾರ ನಿಗಮ ಘೋಷಣೆ ಮಾಡಿ ಸಮಾಜಕ್ಕೆ ಅನುಕೂಲಮಾಡಿದ್ದಾರೆ ಎಂದು ಮರಾಠಾ ಸಮಾಜದ ಮುಖಂಡರು ಹಾಗೂ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್‌ ಆರ್‌.ಎಂ. ಪಾಟೀಲ ಹೇಳಿದರು.

Advertisement

ಮದಭಾವಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಪ್ರಯತ್ನದಿಂದ ಮರಾಠಾ ಅಭಿವೃದ್ಧಿ ಪ್ರಾಧಿಕಾರ ನಿಗಮ ಸ್ಥಾಪನೆ ಮಾಡಿ 50 ಕೋಟಿ ರೂ.ನಿಧಿ  ಕಾಯ್ದಿರಿಸಲಾಗಿದೆ. ಮರಾಠಾ ಸಮಾಜದಲ್ಲಿ  ಹಲವಾರು ಯುವಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಂತಹ ಯುವಕರಿಗೆ ಅನುಕೂಲವಾಗಿದೆ. ಸಮಾಜದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಅಭಿನಂದಿಸುತ್ತೇವೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಮರಾಠಾ ಅಭಿವೃದ್ಧಿ ಪ್ರಾಧಿ ಕಾರ ನಿಗಮ ಸ್ಥಾಪನೆ ಮಾಡಿ ಮರಾಠಾ ಸಮಾಜದವರ ಕನಸು ನನಸು ಮಾಡಿದ್ದಾರೆ ಎಂದರು.

ಈ ವೇಳೆ ಈಶ್ವರ ಕುಂಬಾರೆ, ಅಶೋಕ ಪೂಜಾರಿ, ದತ್ತಾ ಬೋಸಲೆ, ಅರುಣ ಸೂರ್ಯವಂಶಿ, ಮಪ್ಪು ಪೂಜಾರಿ ಶಂಕರ ಪೂಜಾರಿ, ಶಿವಾಜಿ ಗಾಡಿವಡ್ಡರ, ನಿಖೀತ ಪಾಟೀಲ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next