ಶ್ರೀರಂಗಪಟ್ಟಣ: ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ವಿರೋಧಿಸಿದ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜು ವಿವಿಧ ಕನ್ನಡ ಪರಸಂಘಟನೆಗಳೊಂದಿಗೆ ಕೆಆರ್‌ಎಸ್ ಬೃಂದಾವನಕ್ಕೆ ಮುತ್ತಿಗೆ ಯತ್ನ ಮಾಡಿದರು.
ಕೆಆರ್‌ಎಸ್ ಅಣೆಕಟ್ಟೆಯ ಮುಖ್ಯ ದ್ವಾರದಲ್ಲಿ ವಾಟಾಳ್ ನಾಗರಾಜು ನೇತೃತ್ವದಲ್ಲಿ ಜಮಾಯಿಸಿದನೂರಾರು ಕನ್ನಡ ಪರ ಸಂಘಟನೆಗಳ ಮುಖಂಡರು,ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿದರು. ತಮಿಳುನಾಡಿನ ಜನರಿಗೆ ಕಾವೇರಿ ನದಿ ಜೋಡಣೆಮಾಡಲು ಇವತ್ತಿನ ರಾಜ್ಯ ಬಿಜೆಪಿ ಸರ್ಕಾರ ಕುಮ್ಮಕ್ಕುನೀಡುತ್ತಿದೆ. ಕರ್ನಾಟಕ ಮೇಕೆದಾಟು ಯೋಜನೆಗೆಮುಂದಾದರೆ ತಮಿಳುನಾಡು ವಿರೋಧಿಸುತ್ತಿದೆ.ಇದರಿಂದ ಕರ್ನಾಟಕಕ್ಕೆ ಒಂದು ನ್ಯಾಯ ತಮಿಳುನಾಡಿಗೆ ಒಂದು ನ್ಯಾಯವಾಗಿದೆ ಎಂದು ದೂರಿದರು.
ಸರ್ಕಾರದ ವಿರುದ್ಧ ಘೋಷಣೆ ಕೂಗಿದ ವಾಟಾಳ್ ನಾಗರಾಜು, ಬ್ಯಾರಿಕೇಟ್ ನೂಕಿ ಒಳ ಹೋಗಲು ಪ್ರಯತ್ನ ಮಾಡಿದರು. ಈ ವೇಳೆ ಸಿಪಿಐ ಯೋಗೇಶ್,ಪಿಎಸ್‌ಐ ರವಿಕಿರಣ್‌ರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಬ್ಯಾರಿಕೇಡ್ ಮುಂದೆಯೇ ಹೋರಾಟಗಾರರು ಮಲಗಿ ಮಹದಾಯಿ, ಕಾವೇರಿ ನಮ್ಮದು. ಕನ್ನಡಿಗರಾದ ನಾವು ಈಗಲೇ ಎಚ್ಚೆತ್ತು ಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಕನ್ನಡ ಪರ ಸಂಘಟನೆ ಮುಖಂಡರಾದ ಗಿರೀಶ್‌ಗೌಡ, ಜಿ.ಎಂ.ರಾಮು, ನಾರಾಯಣಸ್ವಾಮಿ, ಚಿನ್ನಿರಾಮಚಂದ್ರ, ಮಣಿಕಂಠ, ಪಾರ್ಥಸಾರಥಿ ಮತ್ತಿತರರಿದ್ದರು.
ತಮಿಳುನಾಡಿಗೆ ಬಿಜೆಪಿ ಬೆಂಬಲ : ತಮಿಳುನಾಡಿನಲ್ಲಿ ಬಿಜೆಪಿಯನ್ನುಕಟ್ಟಲು ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರಗಳು ತಮಿಳುನಾಡಿಗೆಬೆಂಬಲ ನೀಡುತ್ತಿವೆ. ಆರ್‌ಎಸ್ ಎಸ್ ಮೂಲಕ ತಮಿಳುನಾಡಿನಲ್ಲಿಬಿಜೆಪಿ ಬಲವರ್ಧನೆಗೆ ರಾಜ್ಯಸರ್ಕಾರವನ್ನು ಕೇಂದ್ರ ಸರ್ಕಾರಬಳಸಿಕೊಂಡು ಕಾವೇರಿ ನೀರಿನಖ್ಯಾತೆ ಮೂಲಕ ರಾಜ್ಯದ ಜನರಹಿತವನ್ನು ಬಲಿ ಕೊಡುತ್ತಿವೆ.ರಾಜ್ಯದ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಕುರ್ಚಿಗಾಗಿ ರಾಜ್ಯವನ್ನುಬಲಿಕೊಡುತ್ತಿದ್ದಾರೆಂದು ವಾಟಾಳ್ ನಾಗರಾಜು ದೂರಿದರು.