Advertisement

ವಿದ್ಯುತ್‌ ನೀತಿ ಜಾರಿಗೆ ವಿರೋಧ

07:48 AM May 29, 2020 | Suhan S |

ದಾವಣಗೆರೆ: ಕೇಂದ್ರ ಸರ್ಕಾರದ ವಿದ್ಯುತ್‌ ನೀತಿ ವಿರೋಧಿಸಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ) ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

2014ರಲ್ಲಿ ಕೇಂದ್ರ ಸರ್ಕಾರ ವಿದ್ಯುತ್‌ ವಿತರಣೆ ಸುಧಾರಣೆಗಾಗಿ ರೂಪಿಸಿದ್ದಂತಹ ತಿದ್ದುಪಡಿ ಕಾಯ್ದೆಯನ್ನು ಈಗ ಜಾರಿಗೆ ತರಲು ಕರಡು ನೀತಿ ಪ್ರಕಟಿಸಿದೆ. ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಉತ್ಪಾದನಾ ಕೇಂದ್ರ, ಸಾಗಾಣಿಕೆ ಮಾರ್ಗ, ವಿತರಣಾ ಕೇಂದ್ರ, ಆಡಳಿತ ಕಚೇರಿ ಒಳಗೊಂಡಂತೆ ಕೋಟ್ಯಂತರ ಮೊತ್ತದ ಸರ್ಕಾರಿ ಅಸ್ತಿಯನ್ನು ಖಾಸಗಿಯವರಿಗೆ ವರ್ಗಾಯಿಸಲು ಈ ಕಾಯ್ದೆ ಸಹಾಯಕವಾಗಿದೆ. ಮುಂದೆ ವಿದ್ಯುತ್‌ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಅನುಕೂಲವಾಗಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ದೇಶ, ಜನ ವಿರೋಧಿ ವಿದ್ಯುತ್‌ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ 20 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಕೇಂದ್ರ ಸರ್ಕಾರದ ಉದ್ದೇಶಿತ ವಿದ್ಯುತ್‌ ನೀತಿಯಿಂದ ಕೃಷಿ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸಿ ಶುಲ್ಕ ವಸೂಲು ಮಾಡಲಾಗುವುದು. ಯಾವುದೇ ಕಾರಣಕ್ಕೂ ಕೃಷಿ ಪಂಪ್‌ಸೆಟ್‌ಗೆ ಮೀಟರ್‌ ಅಳವಡಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next