Advertisement

ವೀರಶೈವ ಮಹಾಸಭೆ ನಿರ್ಣಯಕ್ಕೆ ವಿರೋಧ

07:30 AM Aug 04, 2017 | Team Udayavani |

ಗದಗ: ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ರಾಜ್ಯಾಧ್ಯಕ್ಷ ಎನ್‌.
ತಿಪ್ಪಣ್ಣ ಅವರು “ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ’ ಎಂಬ ವೀರಶೈವ ಮಹಾಸಭೆಯ ಇತ್ತೀಚಿನ
ನಿರ್ಣಯ ಪ್ರಸ್ತಾಪಿಸಲು ಇಲ್ಲಿನ ತೋಂಟದಾರ್ಯ ಮಠಕ್ಕೆ ಭೇಟಿ ನೀಡಿದರು.

Advertisement

ಈ ವೇಳೆ ತೀಕ್ಷ ¡ ಪ್ರತಿಕ್ರಿಯೆ ನೀಡಿದ ಶ್ರೀಗಳು, ಲಿಂಗಾಯತ ಮತ್ತು ವೀರಶೈವ ಎರಡೂ ಪ್ರತ್ಯೇಕ ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅವೆರಡೂ ಒಂದೇ ಅಲ್ಲ. ಅವು ಎಣ್ಣೆ – ನೀರು ಇದ್ದಂತೆ. ಅವುಗಳು ಎಂದೂ ಕೂಡುವುದಿಲ್ಲ. ಅಖೀಲ ಭಾರತ ವೀರಶೈವ ಮಹಾಸಭೆ ಲಿಂಗಾಯತ ಸಮಾಜದ ಹಿತ ಕಾಪಾಡುವುದು ಬಿಟ್ಟು ಕೆಲ
ಸ್ವಾಮೀಜಿಗಳ ಹಿತಕ್ಕೆ ಸೀಮಿತವಾಗಿದೆ. ಆದರೆ ಬದಟಛಿತೆಯುಳ್ಳ ನಮ್ಮಂಥ ಕೆಲ ಸ್ವಾಮೀಜಿಗಳು ಮಾತ್ರ ಸಮಾಜದ ಹಿತ ಕಾಪಾಡುತ್ತಿದ್ದೇವೆ ಹೊರತು, ಕೆಲವು ಸ್ವಾರ್ಥ ಸ್ವಾಮೀಜಿಗಳ ಹಿತವನ್ನಲ್ಲ. ವೀರಶೈವ ಮಹಾಸಭೆ ಇರುವುದು ಸ್ವಾಮೀಜಿಗಳಿಗಾಗಿ. ನಾವು ಇರುವುದು ಸಮಾಜಕ್ಕಾಗಿ. ಈ ಹಿನ್ನೆಲೆಯಲ್ಲಿ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂದು ಖಾರವಾಗಿ ಹೇಳಿದರು.

ಮನವೊಲಿಕೆ ಪ್ರಯತ್ನ: ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ವೀರಶೈವ- ಲಿಂಗಾಯತ ಎರಡೂ ಧರ್ಮಗಳು ಒಂದೇ ಆಗಿವೆ. ಈ ವಿಚಾರದಲ್ಲಿ ರುದ್ರಾಕ್ಷಿ ಮಠದ ಶ್ರೀ, ತೋಂಟದ ಸಿದಟಛಿಲಿಂಗ ಶ್ರೀಗಳು, ಮಾತೆ ಮಹಾದೇವಿ ಹಾಗೂ ಸಚಿವ ಎಂ.ಬಿ. ಪಾಟೀಲ ಅವರ ಮನವೊಲಿಸಲಾಗುತ್ತದೆ. ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ಒಡೆಯಲು ಬಿಡುವುದಿಲ್ಲ ಎಂದು ತಿಳಿಸಿದರು.

“ಪ್ರತ್ಯೇಕ ಧರ್ಮದ ಬೇಡಿಕೆಯೇ ತಪ್ಪು’

ಬೆಂಗಳೂರು: “ಬಸವಪೂರ್ವದಲ್ಲೇ ಲಿಂಗಾಯತ ಮತ್ತು ವೀರಶೈವ ಸಿದಾಟಛಿಂತದ ದರ್ಶನವಿತ್ತು. ಬಸವಣ್ಣನವರು
ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವ ಶೈವ ಮಾರ್ಗವನ್ನು ಸರಳೀಕರಣಗೊಳಿಸಿದರಷ್ಟೇ. ಹಾಗಾಗಿ,
ಬಸವಣ್ಣನವರನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಧರ್ಮದ ಬೇಡಿಕೆ ಇಡುತ್ತಿರುವುದೇ ತಪ್ಪು’ ಎಂದು ವೀರಭದ್ರ ಸೇನೆಯ
ಸಂಸ್ಥಾಪಕ ಕೆ.ಎಸ್‌. ಕರಾಂಜೆ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊಂಡುಗೋಳಿ ಕೇಶಿರಾಜನ ಮಂತ್ರಮಹತ್ವದ ಕಂದ ಮತ್ತು ಇತರ ಕೃತಿಗಳಲ್ಲಿ ಲಿಂಗಾಯತ ಮತ್ತು ವಿರಶೈವ ಲಿಂಗಾಯತ ಎಂಬ ಪರ್ಯಾಯ ನಾಮಗಳು ಉಲ್ಲೇಖಗೊಂಡಿವೆ. ಬಸವಪೂರ್ವದಲ್ಲಿ ಕೇಶಿರಾಜ, ಶಂಕರದಾಸಿಮಯ್ಯ,
ಸೋಡಳಚಬಾಚರಸ ಮತ್ತಿತರ ಶಿವಶರಣರು ಅಷ್ಟಾವರಣಸಹಿತ ಆಚಾರಾದಿಗಳನ್ನು ಮೈಗೂಡಿಸಿಕೊಂಡಿದ್ದರು. ಅಷ್ಟೇ ಯಾಕೆ, ಹರಪ್ಪ ನಾಗರಿಕತೆಯಲ್ಲೂ ಲಿಂಗೋಪಾಸನೆ ಇತ್ತು. ಆದ್ದರಿಂದ ಬಸವಣ್ಣನವರನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಧರ್ಮ ಕೇಳುತ್ತಿರುವುದು ತಪ್ಪು’ ಎಂದು ಪ್ರತಿಪಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next