Advertisement

ಮೊಸಳೆಯ ತೆರವಿಗೆ ವಿರೋಧ

01:05 AM Jun 24, 2019 | Sriram |

ಅಹಮದಾಬಾದ್‌/ವಡೋದರಾ: ಗುಜರಾತ್‌ನ ಮಹೀಸಾಗರ್‌ ಜಿಲ್ಲೆಯ ಪಲ್ಲ ಗ್ರಾಮ ದಲ್ಲಿ ಖೋಡಿಯಾರ್‌ ಮಾತಾ ದೇಗುಲಕ್ಕೆ ಮೊಸಳೆ ನುಗ್ಗಿದೆ. ಗರ್ಭಗುಡಿಗೆ ಪ್ರವೇಶ ಮಾಡಿದ್ದ ಆರು ಅಡಿಯ ಜಲಜೀವಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಾಕುಬೇಕಾಯಿಕು. ಪಟೇಲ್‌ ಸಮುದಾಯದ ಆರಾಧ್ಯ ದೇವಿ ಮೊಸಳೆಯನ್ನೇರಿ ಸಂಚಾರ ಮಾಡುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

Advertisement

ದೇಗುಲದೊಳಕ್ಕೆ ಜಲಜೀವಿ ಪ್ರವೇಶ ಮಾಡಿದೆ ಎಂಬ ವಿಚಾರ ತಿಳಿದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಎಂ.ಪರ್ಮಾರ್‌ ಪಲ್ಲ ಗ್ರಾಮಕ್ಕೆ ತೆರಳಿದ್ದರು. ಅಷ್ಟರಲ್ಲಾಗಲೇ ಅಲ್ಲಿ ಸಾವಿರಾರು ಮಂದಿ ಸೇರಿದ್ದರು. ಜತೆಗೆ ಕಾರ್ಯಾ ಚರಣೆಗೂ ಅಡ್ಡಿಪಡಿಸಿದರು. ಗ್ರಾಮ ಸ್ಥರ ಜತೆಗೆ ಮಾತುಕತೆ ನಡೆಸಿ ಗರ್ಭಗುಡಿಗೆ ತೆರಳಿ ಅರಣ್ಯಾಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿವಲ್ಲಿ ಯಶಸ್ವಿಯಾದರು. ಅನಂತರ ಅದನ್ನು ದೂರ ಪ್ರದೇಶಕ್ಕೆ ಬಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next