Advertisement

ಪಲಿಮಾರಿನಲ್ಲಿ ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ವಿರೋಧ

11:11 AM Jun 02, 2019 | Team Udayavani |

ಪಡುಬಿದ್ರಿ: ಪಲಿಮಾರು ಅಣೆಕಟ್ಟು ಬಳಿ ಖಾಸಗಿ ಸ್ಥಳದಲ್ಲಿ ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ಸ್ಥಳೀಯರು ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.

Advertisement

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು ನಂದಿಕೂರು ಸಬ್‌ಸ್ಟೇಷನ್‌ನಿಂದ ಮೂಲ್ಕಿ ಸಬ್‌ಸ್ಟೇಷನ್‌ಗೆ 110 ಕೆವಿಎ ವಿದ್ಯುತ್‌ ಟವರ್‌ ನಿರ್ಮಾಣಕ್ಕೆ ಮುಂದಾಗಿತ್ತು. ಇಂದು ಬೆಳಗ್ಗೆ ಪಲಿಮಾರು ಗ್ರಾಮ ಪಂಚಾಯತ್‌ನ ಮೂಡು ಪಲಿಮಾರು ಅಣೆಕಟ್ಟು ಬಳಿ ಸರ್ವೇ ಕಾರ್ಯ ನಡೆಸಲು ಮುಂದಾಗುತಿದ್ದಂತೆಯೇ ಸ್ಥಳೀಯರು ತಡೆಯೊಡ್ಡಿದರು. ಕೂಡಲೇ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಶನರ್‌ ಮಧುಕೇಶ್ವರ, ತಹಶೀಲ್ದಾರ್‌ ರಶ್ಮಿ, ಕೆಪಿಟಿಸಿಎಲ್ ಅಧಿಕಾರಿ ರವಿಕಾಂತ್‌ ಕಾಮತ್‌ ಸ್ಥಳಕ್ಕೆ ಬಂದು ಸ್ಥಳೀಯರೊಂದಿಗೆ ಚರ್ಚಿಸಿದರು.

ಆದರೆ ಸ್ಥಳೀಯರು ಈ ಪ್ರದೇಶಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್‌ ಟವರ್‌ಗಳನ್ನು ಅಳವಡಿಸಬಾರದು. ಈ ಭಾಗವು ಜನ ವಸತಿ ಪ್ರದೇಶವಾಗಿರುವುದರಿಂದ ವಿದ್ಯುತ್‌ ಟವರ್‌ ಅಳವಡಿಸಿದಲ್ಲಿ ಜನರು ಆತಂಕದಲ್ಲಿ ಜೀವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಟ್ಟು ಬಿಡದ ಸ್ಥಳೀಯರು ಈ ಜಾಗದ ಬದಲು ಪರ್ಯಾಯ ಜಾಗವನ್ನು ಗುರುತಿಸುವಂತೆ ಆಗ್ರಹಿಸಿದರು. ಬಳಿಕ ಸ್ಥಳೀಯರು ಪಕ್ಕದ ಇನ್ನೊಂದು ಜಾಗವು ಜನವಸತಿ ಇಲ್ಲದೆ ಇರುವುದರಿಂದ ಅಲ್ಲಿ ಟವರ್‌ ಅಳವಡಿಸಬೇಕು ಎಂದು ಗ್ರಾ. ಪಂ. ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಹಾಗೂ ತಾ. ಪಂ. ಸದಸ್ಯ ದಿನೇಶ್‌ ಪಲಿಮಾರು ಆಗ್ರಹಿಸಿದರು.

ಈ ಬಗ್ಗೆ ಕೆಪಿಟಿಸಿಎಲ್ ಅಧಕಾರಿಗಳಿಗೆ ಪರ್ಯಾಯ ಜಾಗವನ್ನು ಗುರುತಿಸಿ ಸರ್ವೇ ನಡೆಸಿ ಮುಂದಿನ ಕ್ರಮಕೈಗೊಳ್ಳುವಂತೆ ಕುಂದಾಪುರದ ಸಹಾಯಕ ಕಮಿಶನರ್‌ ಸೂಚಿಸಿದರು.

Advertisement

ಬಳಿಕ ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಕೆಪಿಟಿಸಿಎಲ್ ಅಧಿಕಾರಿಗಳಾದ ಗಂಗಾಧರ, ಭಾರತಿ, ರಾಜನ್‌, ಕಂದಾಯ ಪರಿವೀಕ್ಷಕ ರವಿಶಂಕರ್‌, ಪಿಡಿಓ ಸತೀಶ್‌, ಗ್ರಾಮಕರಣಿಕ ಲೋಕನಾಥ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next