Advertisement

“ಕೇಂದ್ರ ಸರಕಾರದಿಂದ ಸಂವಿಧಾನ ವಿರೋಧಿ ನಿಲುವು’

07:05 AM Aug 19, 2017 | Team Udayavani |

ಕಾರ್ಕಳ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸಂವಿಧಾನ ವಿರೋಧಿ ನಿಲುವನ್ನು ಹೊಂದಿದ್ದು, ಅದಾನಿ,ಅಂಬಾನಿ ಮೊದಲಾದ ಬೃಹತ್‌ ಉದ್ಯಮ ವಲಯದ 8 ಲಕ್ಷ ಕೋಟಿಗೂ ಹೆಚ್ಚು ಸಾಲ ಮರುಪಾವತಿ ಮನ್ನಾ ಮಾಡುವ ಮೂಲಕ ಉಳ್ಳವರ ಸರಕಾರವೆಂದು ಸಾಬೀತುಗೊಳಿಸಿದೆ  ಎಂದು ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಹೇಳಿದ್ದಾರೆ.

Advertisement

ಅವರು ನಿಟ್ಟೆ ಪರಪ್ಪಾಡಿಯಲ್ಲಿ  ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಚೈತನ್ಯಧಾರಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಬ್ಯಾಂಕ್‌ ರಾಷ್ಟ್ರೀಕರಣ ಮತ್ತು ಸಾಲಮೇಳದ ಮೂಲಕ ಅಂದು ಕಾಂಗ್ರೆಸ್‌ ಬಡವರಿಗೆ ಬ್ಯಾಂಕಿನೊಂದಿಗಿನ ವ್ಯವಹಾರದ ಅವಕಾಶ ಮಾಡಕೊಟ್ಟರೆ,ಇಂದು ಮೋದಿ ನೇತೃತ್ವ ಬಿಜೆಪಿ ಸರಕಾರ ನೋಟು ಅಪನಗದೀಕರಣದ ಮೂಲಕ ಬಡವರಿಗೆ ಬ್ಯಾಂಕ್‌ ವ್ಯವಹಾರದ ಅವಕಾಶವನ್ನೆ ಮುಚ್ಚಿದೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಎನ್‌. ಕೋಟ್ಯಾನ್‌ ಅಧ್ಯಕ್ಷತೆ ವಹಿಸಿ, ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವಂತೆ ಕರೆನೀಡಿದರು. ಹಾಗೂ ಬೂತ್‌ ಸಮಿತಿ ರಚನೆ ಬಗ್ಗೆ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ನೇಮಿರಾಜ ರೈ ಸಂದಭೋìಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಭೋಜ ಶೆಟ್ಟಿಗಾರ್‌, ಲೀಲ ಪೂಜಾರ್ತಿ, ದಿವಾಕರ ನಿಟ್ಟೆ, ಏಸುದಾಸ, ಹರೀಶ ಆಚಾರ್ಯ, ಯಶೋಧಾ ಪೂಜಾರಿ ಹಾಗೂ ಕಾರ್ಯಕರ್ತೆಯರು  ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next