Advertisement

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

10:28 PM May 21, 2024 | Team Udayavani |

ಬೆಂಗಳೂರು: ಬೆಳಗಾವಿಯ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಲ ಮಾಡಿದ ಯುವಕನಿಗೆ ಗೃಹ ಬಂಧನ ವಿಧಿಸಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಾಳೇಗಾರಿಕೆ ರಾಜಕಾರಣದ ಪೋಷಣೆಗೆ ಹೆಸರಾದ ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ರೈತ ಶೋಷಣೆ ಮಿತಿ ಮೀರುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಸತೀಶ್‌ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ತನ್ನ ಕೃಷಿ ಚಟುವಟಿಕೆಯ ಸಲುವಾಗಿ ಮಾಡಿಕೊಂಡಿದ್ದ ಖಾಸಗಿ ಸಾಲ ತೀರಿಸಲಾಗದೆ ಸಾಲಕೊಟ್ಟವರಿಂದ ಪತ್ನಿ, ಪುತ್ರನನ್ನು ನಿಷೇಧಿತ ಜೀತ ಪದ್ಧತಿ ಹಾಗೂ ಅಕ್ರಮ ಗೃಹ ಬಂಧನದ ಶಿಕ್ಷೆ ಅನುಭವಿಸುವ, ಅಪಮಾನ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತದ್ದಾಗಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next