Advertisement

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ

02:43 PM Jan 21, 2020 | Suhan S |

ಯಾದಗಿರಿ: ಸಿಎಎ ಎನ್‌ಆರ್‌ಸಿ ಹಾಗೂ ಎನ್‌ ಆರ್‌ಪಿ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

Advertisement

ಇತರೆ ದೇಶಗಳಲ್ಲಿ ವಾಸಿಸಲು ಆಗದೇ ಭಾರತಕ್ಕೆ ಬಂದರೆ ಅವರಿಗೆ ಮಾನವೀಯತೆ ದೃಷ್ಟಿಯಿಂದ ಆಶ್ರಯ ನೀಡುವುದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಎಲ್ಲರಿಗೂ ಬರಲು ಅವಕಾಶ ನೀಡಬೇಕು. ಆದರೆ ಒಂದು ಧರ್ಮದವರನ್ನು ಹೊರಗಿಟ್ಟು ಕಾನೂನು ರೂಪಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ವಿನಾಕಾರಣ ಇಲ್ಲದ ಕಾನೂನು ರಚಿಸುವ ಮೂಲಕ ದೇಶದಲ್ಲಿ ಜನರಿಗೆ ಬೇಕಾದ ಕೆಲಸ ಮಾಡುವುದು ಬಿಟ್ಟು ಅನ್ಯ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ದೇಶದ ಜ್ವಲಂತ ಸಮಸ್ಯೆ ಮುಚ್ಚಿಡಲು ಸಿಎಎ, ಎನ್‌ಆರ್‌ಸಿ, ಎನ್‌ಆರ್‌ಪಿಯಂತಹಕಾರ್ಯಕ್ರಮ ತರಲಾಗುತ್ತಿದೆ. ದೇಶದ ಬಹುತೇಕ ಜನರಲ್ಲಿ ದಾಖಲೆಗಳೇ ಇಲ್ಲ. ಎನ್‌ಆರ್‌ಸಿ ಕಾಯ್ದೆ ಜಾರಿಗೆ ಬಂದರೆ ಅದು ಹೇಗೆ ದಾಖಲೆ ಒದಗಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಈ ಎಲ್ಲ ಕಾಯ್ದೆಗಳಿಗೆ ದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದಈ ಕಾಯ್ದೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಧರಣಿ ನೇತೃತ್ವ ವಹಿಸಿದ್ದರು. ಚಂದಪ್ಪ ಮುನಿಯಪ್ಪನೋರ, ಶಿವಕುಮಾರ ತಳವಾರ, ಶಿವಲಿಂಗಹಸನಾಪುರ, ಅಮರೇಶ ಶೆಳ್ಳಗಿ, ಹಣಮಂತಪ್ಪ ರೋಜಾ, ಮಲ್ಲಿಕಾರ್ಜುನ ಹುರಸಗುಂಡಗಿ,ಚಂದ್ರಶೇಖರ ಮುಕ್ತಾಪುರ, ಸುಭಾಷ ಹುರಸಗುಂಡಗಿ, ಸಂದೀಪ ಹೊಸಮನಿ, ಲಕ್ಷ್ಮಣ ರಸ್ತಾಪುರ, ಬಾಲರಾಜ ಖಾನಾಪುರ, ನಾಗರಾಜ ಹುರಸಗುಂಡಗಿ, ಸಂತೋಷ ಗುಂಡಳ್ಳಿ, ಮಲ್ಲಪ್ಪ ಹಾಲಭಾವಿ, ಅಮರೇಶ ದಿಗ್ಗಿ, ಶರಣಪ್ಪ ಕೋಟಿ, ಭೀಮರಾಯ ಜುನ್ನಾ, ಶರಬಣ್ಣ ರಸ್ತಾಪುರ, ಸುರಪುರದ ವೀರಭದ್ರಪ್ಪ ದೊಡ್ಡಮನಿ ತಳವಾರಗೇರಾ,

ಶೇಖರ ಬಡಿಗೇರ, ಗೌತಮ ಬಡಿಗೇರ, ಆಕಾಶ ಕಟ್ಟಿಮನಿ, ವೆಂಕಟೇಶ ದೇವಾಪುರ, ತಾಯಪ್ಪ ಭಂಡಾರಿ, ವಡಗೇರಾ ಮಲ್ಲಪ್ಪ ಪೂಜಾರಿ, ಬಸಪ್ಪ, ಶರಣಪ್ಪ ಮಳ್ಳಳ್ಳಿ, ಹಣಮಂತ ಗುಂಡಳ್ಳಿ, ಚನ್ನಬಸವ, ಹುಣಸಗಿ ಯಲ್ಲಾಲಿಂಗ ಹೊಸಮನಿ, ಶರಣಪ್ಪ ಕೊಡಮನಳ್ಳಿ, ಹನಮಂತ ಗುರುಸುಣಿಗಿ, ಮಲ್ಲಿಕಾರ್ಜುನ ಚಟ್ನಳ್ಳಿ, ಹಣಮಂತ ಬೀರನೂರ, ಶರಣಪ್ಪ ಅನವಾರ,  ಸಣ್ಣ ಶ್ರೀಮಂತ, ದೊಡ್ಡ ಶ್ರೀಮಂತ, ದೊಡ್ಡಪ್ಪ ಕಾಡಂಗೇರಾ ಪಾಲ್ಗೊಂಡಿದ್ದರು. ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಜಿಲ್ಲಾಧಿ ಕಾರಿಗಳಿಗೆ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next