Advertisement

ಕ್ವಾರಂಟೈನ್‌ ವಿರೋಧಿಸಿ ಅಧಿಕಾರಿಗಳೊಂದಿಗೆ ವಾಗ್ವಾದ

01:30 PM May 24, 2020 | mahesh |

ಭದ್ರಾವತಿ: ಶುಕ್ರವಾರ ಮಹಾರಾಷ್ಟ್ರದಿಂದ ಭದ್ರಾವತಿಗೆ ಬಂದ ನಾಲ್ಕು ಮಕ್ಕಳು ಸೇರಿದಂತೆ 18 ಜನರನ್ನು ಹುಣಸೆಕಟ್ಟೆ ಗ್ರಾಮದ ಸರ್ಕಾರಿ ಬಾಲಕಿಯರ ಹಾಸ್ಟೆಲ್‌ ನಲ್ಲಿ ಕ್ವಾರಂಟೈನ್‌ ಮಾಡುವುದಕ್ಕೆ ವಿರೋಧಿಸಿ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿದರು.

Advertisement

ಅವರನ್ನು ತಾಲೂಕಿನ ಯಾವ ಭಾಗದ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡುವುದು ಎಂಬ ಬಗ್ಗೆ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕೋವಿಡ್‌ ಅಧಿಕಾರಿಗಳು ಶುಕ್ರವಾರ ಸಂಜೆ ಸಭೆ ಸೇರಿ ಚರ್ಚಿಸಿ ಅಂತಿಮವಾಗಿ ಆ 18 ಜನರನ್ನು ತಾಲೂಕಿನ ಹುಣಸೆಕಟ್ಟೆ ಜಂಕ್ಷನ್‌ ಬಳಿಯಿರುವ ಸರ್ಕಾರಿ ಬಾಲಕಿಯರ ವಸತಿಗೃಹದಲ್ಲಿರಿಸಲು ನಿರ್ಧರಿಸಿತು.

ಪ್ರತಿಭಟನೆ: ಮಹಾರಾಷ್ಟ್ರದಿಂದ ಬಂದಿರುವ 18 ಜನರನ್ನು ಹುಣಸೆಕಟ್ಟೆಯಲ್ಲಿನ ಸರ್ಕಾರಿ ಬಾಲಕಿಯರ ವಸತಿಗೃಹದಲ್ಲಿರಿಸಲು ಅವರನ್ನುಕರೆತರಲಾಗುತ್ತಿದೆ ಎಂಬ ವಿಷಯ ತಿಳಿದ ಆ ಗ್ರಾಮದ ಹಲವರು, ರಾತ್ರಿ 8 ಗಂಟೆಗೆ ಸರ್ಕಾರಿ ಬಾಲಕಿಯರ ವಸತಿಗೃಹದ ಬಳಿ ಜಮಾಯಿಸಿ ಕ್ವಾರಂಟೈನ್‌ಗೆ ಇಡಲ್ಪಡುವ ಜನರನ್ನು ಹೊತ್ತ ವಾಹನ ಅಲ್ಲಿಗೆ ಬರುತ್ತಿದ್ದಂತೆ ತಮ್ಮ ಗ್ರಾಮದ ಯಾವುದೇ ಸ್ಥಳದಲ್ಲಿ ಯಾರನ್ನೂ ಕ್ವಾರಂಟೈನ್‌ನಲ್ಲಿಡಬಾರದೆಂದು ರಸ್ತೆಗೆ ಅಡ್ಡವಾಗಿ ಮಲಗಿ ಕ್ವಾರಂಟೈನ್‌ಗೆ ವಿರೋಧಿಸಿದರು. ಇದಕ್ಕೆ ಅಲ್ಲಿನ ಕೆಲವು ಚುನಾಯಿತ ಪ್ರತಿನಿಧಿಗಳೂ ಬೆಂಬಲವಾಗಿ ನಿಂತು ಬೇರೆಡೆ ಕ್ವಾಂರಂಟೈನ್‌ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಲು ಮುಂದಾದರು. ಆದರೆ ತಹಶೀಲ್ದಾರ್‌ ಶಿವಕುಮಾರ್‌ ಹಾಗೂ ಅವರ ತಂಡದ ಅಧಿಕಾರಿಗಳು ತಡರಾತ್ರಿ 11ರವರೆಗೆ ಅಲ್ಲಿನ ಜನರ ಹಾಗೂ ಚುನಾಯಿತ ಪ್ರತಿನಿಧಿಗಳ ಬಳಿ ಮಾತಾಡಿ ಅವರ ಮನವೊಲಿಸಿ ಮಹಾರಾಷ್ಟ್ರದಿಂದ ಬಂದಿರುವ 18 ಜನರನ್ನು ಹುಣಸೆಕಟ್ಟೆಯಲ್ಲಿನ ಸರ್ಕಾರಿ ಬಾಲಕಿಯರ ವಸತಿಗೃಹದಲ್ಲಿರಿಸುವಲ್ಲಿ ಯಶಸ್ವಿಯಾದರು.

ನಗರಸಭೆ ಆಯುಕ್ತ ಮನೋಹರ್‌, ತಾಪಂ ಕಾರ್ಯ ನಿರ್ವಹಣಾಧಿಕಾರಿ ತಮ್ಮಣ್ಣ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ| ಗಾಯತ್ರಿ, ಹಿರಿಯ ಸಹಾಯಕ ಸಿಬ್ಬಂದಿ ನೀಲೇಶ್‌ರಾಜ್‌, ಪೊಲೀಸ್‌ ವೃತ್ತ ನಿರೀಕ್ಷಕರು, ಪೊಲೀಸ್‌ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next