Advertisement

ರೈಲ್ವೆ ಖಾಸಗೀಕರಣಕ್ಕೆ ವಿರೋಧ

06:27 PM Oct 09, 2020 | Suhan S |

ವಾಡಿ: ಖಾಸಗೀಕರಣದ ರತ್ನಗಂಬಳಿ ಹಾಸಿ  ಬಂಡವಾಳಶಾಹಿಗಳ ಪಾದಸೇವೆಗೆ ನಿಂತಿರುವ ಕೇಂದ್ರ ಬಿಜೆಪಿ ಸರಕಾರ, ಲಾಭದಾಯಕ ಭಾರತೀಯ ರೈಲ್ವೆ ಇಲಾಖೆ ಮಾರಾಟ ಮಾಡಲು ಹೊರಟಿದೆ ಎಂದುಆರೋಪಿಸಿ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್‌ ಪಕ್ಷದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ರೈಲು ನಿಲ್ದಾಣ ಎದುರು “ರೈಲು ಮಾರಾಟ ಒಪ್ಪೋದಿಲ್ಲ, ರೈಲ್ವೆ ಖಾಸಗೀಕರಣಕ್ಕೆ  ಧಿಕ್ಕಾರ, ರೈಲ್ವೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು’ ಎಂಬಿತ್ಯಾದಿ ಬರಹಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ರೈಲ್ವೆಖಾಸಗೀಕರಣದಿಂದ ಹಿಂದೆ ಸರಿಯಬೇಕು ಅಥವಾಉಗ್ರ ಹೋರಾಟ ಎದುರಿಸಲು ಸಿದ್ಧರಾಗಬೇಕು ಎಂದು ಗುಡುಗಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್‌ಯುಸಿಐ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್‌ ವೀರಭದ್ರಪ್ಪ ಆರ್‌.ಕೆ, ರೈಲ್ವೆ ಖಾಸಗೀಕರಣ ಮಾಡಲುಕಾನೂನು ತಿದ್ದುಪಡಿಗೆ ಮುಂದಾಗಿರುವ ಬಿಜೆಪಿ ಸರಕಾರ, ಲಕ್ಷಾಂತರ ಕಾರ್ಮಿಕರನ್ನು ಬೀದಿಗೆ ತಳ್ಳಲು ಹೊರಟಿದೆ. ರೈಲುಗಳು ಮತ್ತು ರೈಲು ನಿಲ್ದಾಣಗಳನ್ನುವಿವಿಧ ಬಂಡವಾಳಶಾಹಿ ಶೋಷಕರಿಗೆ ಒತ್ತೆಯಿಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಮೋದಿ ಸರಕಾರ, ಕೋವಿಡ್‌ ಹೆಸರಿನಲ್ಲಿ ಹೇರಲಾದ ಲಾಕ್‌ಡೌನ್‌ ಪರಸ್ಥಿತಿಯನ್ನು ರಾಜಕೀಯವಾಗಿ ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಿದೆ. ಇಡೀ ದೇಶದ ಆಡಳಿತವನ್ನು ದೊಡ್ಡ ದೊಡ್ಡ ಉದ್ಯಮಿಪತಿಗಳ ಉಡಿ ತುಂಬಲು ತುದಿಗಾಲ ಮೇಲೆ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಯುಸಿಐ ಮುಖಂಡರಾದ ಗುಂಡಣ್ಣ ಕುಂಬಾರ, ಶರಣು ಹೇರೂರ, ಗೌತಮ ಪರತೂರಕರ, ಮಲ್ಲಿನಾಥ ಹುಂಡೇಕಲ್‌, ವಿಠuಲ ರಾಠೊಡ, ರಾಜು ಒಡೆಯರ್‌, ಮಲ್ಲಿಕಾರ್ಜುನ ಗಂದಿ, ಮಲ್ಲಣ್ಣ ದಂಡಬಾ, ಅವಿನಾಶ ಒಡೆಯರ್‌, ಗೋವಿಂದ ಯಳವಾರ, ದತ್ತು ಹುಡೇಕರ, ಸಾಬುಯಾಧವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರೈಲು ನಿಲ್ದಾಣ ವ್ಯವಸ್ಥಾಪಕ ಜೆ.ಎನ್‌.ರೆಡ್ಡಿ ಅವರು ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next