Advertisement

ಕೋವಿಡ್  ಕೇರ್‌ ಸೆಂಟರ್‌ ತೆರೆಯಲು ವಿರೋಧ

11:38 AM May 29, 2021 | Team Udayavani |

ಹೊಸನಗರ: ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಪಟ್ಟಣದ ಹೃದಯ ಭಾಗದಲ್ಲಿರುವ ಮೆಟ್ರಿಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 50 ಹಾಸಿಗೆಯ ಹೆಚ್ಚುವರಿ ಕೋವಿಡ್‌ ಕೇರ್‌ ಸೆಂಟರ್‌ ತೆರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಸಾಮಾಜಿಕ ಕಾರ್ಯಕರ್ತೆ ಸೀಮಾ ಕಿರಣ್‌ ಶೆರಾವೊ ನೇತೃತ್ವದಲ್ಲಿ ತಹಶೀಲ್ದಾರ್‌ ವಿ.ಎಸ್‌.ರಾಜೀವ್‌ ಅವರನ್ನು ಭೇಟಿ ಮಾಡಿ, ಈಗಾಗಲೇ ಕೇರ್‌ ಸೆಂಟರ್‌ಗೆ ಗುರುತು ಮಾಡಿರುವ ವಿದ್ಯಾರ್ಥಿ ನಿಲಯ ಗಣಪತಿ ದೇವಸ್ಥಾನ ರಸ್ತೆ, ವಿದ್ಯಾಸಂಘ ರಂಗಮಂದಿರ, ಸರ್ಕಲ್‌ ಇನ್ಸಪೆಕ್ಟರ್‌ ಕಚೇರಿ ಸೇರಿದಂತೆ ರೆಸಿಡೆನ್ಸಿಯಲ್‌ ಇರುವ ಸ್ಥಳದಲ್ಲಿ ಇದ್ದು ಇಲ್ಲಿ ಕೇರ್‌ ಸೆಂಟರ್‌ ತೆರೆದರೆ ಅಪಾಯಕ್ಕೆ ಆಹ್ವಾನಿಸಿದಂತೆ ಎಂದು ಆರೋಪಿಸಿದ್ದಾರೆ.

ಸರ್ಕಾರ ನೀಡಿದ ಸೂಚನೆ ಮೇರೆಗೆ ಕೇರ್‌ ಸೆಂಟರ್‌ ತೆರೆಯುವುದು ಸ್ವಾಗತಾರ್ಹ. ಆದರೆ ಆರಂಭಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯ ಸೂಕ್ತ ಆಯ್ಕೆಯಲ್ಲ.ಈ ಮಾರ್ಗದಲ್ಲಿ ಪ್ರತಿನಿತ್ಯ ಸಾರ್ವಜನಿಕರು ಅಗತ್ಯ ವಸ್ತುಗಳಿಗಾಗಿ ಓಡಾಡುತ್ತಾರೆ. ಅಲ್ಲದೆ ಈ ವಿದ್ಯಾರ್ಥಿ ನಿಲಯದ ತ್ಯಾಜ್ಯಹೊಟ್ಟು ಕೆರೆ ಸೇರುತ್ತದೆ. ಇಲ್ಲಿ ಕೊರೊನಾ ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ಮಾಡುವುದು ಸೂಕ್ತವಲ್ಲ ಎಂದು ಮನವಿ ಮಾಡಿದ್ದಾರೆ.

ಸ್ಥಳೀಯರಾದ ರಾಘವೇಂದ್ರ, ಬಾಬಣ್ಣ, ಪ್ರದೀಪ್‌ ಆಚಾರ್‌, ಅನಿಲ್‌ ಆಚಾರ್‌, ಸತೀಶ್‌, ಶ್ರೀಕಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next