Advertisement

“ನರ್ಮ್ಗೆ ವಿರೋಧ: ಎಲ್ಲ ರಸ್ತೆಗಳು ರಾಷ್ಟ್ರೀಕರಣಗೊಳ್ಳಲಿ’

02:45 AM Jul 14, 2017 | Team Udayavani |

ಉಡುಪಿ: ಜನೋಪಯೋಗಿ ನರ್ಮ್ ಬಸ್‌ಗಳನ್ನು ಖಾಸಗಿ ಬಸ್‌ ಮಾಲಕರು ವಿರೋಧಿಸುತ್ತಾರೆಂದರೆ ಉಡುಪಿಯಲ್ಲಿ ಖಾಸಗಿ ಬಸ್‌ಗಳು ಕೂಡ ಯಾಕೆ ಬೇಕು? ಅದಕ್ಕಾಗಿ ಜಿಲ್ಲೆಯ ಎಲ್ಲ ರಸ್ತೆಗಳನ್ನು  ರಾಷ್ಟ್ರೀಕರಣಗೊಳಿಸಿ ಸರಕಾರಿ ಬಸ್‌ಗಳನ್ನು ಮಾತ್ರ ಓಡಿಸಲಿ ಎಂದು ಉಡುಪಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್‌.ಎಲ್. ಡಯಾಸ್‌ ಆಗ್ರಹಿಸಿದ್ದಾರೆ. 

Advertisement

ನರ್ಮ್ ಬಸ್‌ಗಳ ವಿನ್ಯಾಸ ಎಲ್ಲ ವರ್ಗದ ಪ್ರಯಾಣಿಕರನ್ನು ಗಮನದಲ್ಲಿಟ್ಟು ರಚಿಸಲಾಗಿದ್ದು, ಮೆಟ್ಟಿಲು ಕೆಳಸ್ತರದಲ್ಲಿದ್ದು ಹಿರಿಯರು, ಮಹಿಳೆಯರು, ಅಂಗವಿಕಲರಿಗೆ ನೆರವಾಗಿದೆ. ಕೆಲವೆಡೆ ಖಾಸಗಿ ಬಸ್ಸಿನವರು ಒಂದು ಮಾರ್ಗದಲ್ಲಿ 4-5 ಬಾರಿ ಓಡಾಟದ ಪರವಾನಿಗೆಯಿದ್ದರೂ ಸಹ ಬೆಳಗ್ಗೆ ಹಾಗೂ ಸಂಜೆ ಮಾತ್ರ ಬಸ್‌ ಓಡಿಸುತ್ತಾರೆ. ಇದರಿಂದ ಜನರಿಗೆ ತೊಂದರೆಗಳಾಗುತ್ತಿದ್ದು, ನರ್ಮ್ ಬಸ್‌ಗಳ ಸಂಚಾರಕ್ಕೆ ಧಕ್ಕೆಯಾದರೆ ರೈಲ್ವೆ ಯಾತ್ರಿಕರ ಸಂಘ ಉಗ್ರ ಹೋರಾಟ ಸಂಘಟಿಸಲಿದೆ ಎಂದರು.    

ಅಪರ ಜಿಲ್ಲಾಧಿಕಾರಿಗೆ ಮನವಿ 
ನರ್ಮ್ ಬಸ್‌ಗಳ ಓಡಾಟಕ್ಕೆ ಖಾಸಗಿ ಬಸ್‌ ಮಾಲಕರ ಸಂಘ ಹೈಕೋರ್ಟ್‌ನಿಂದ ತಡೆಯೊಡ್ಡಿರುವುದನ್ನು ಖಂಡಿಸಿ ಹಾಗೂ ನರ್ಮ್ ಬಸ್‌ ಸಂಚಾರಕ್ಕೆ ಕಡಿವಾಣ ಹಾಕಬಾರದು ಎಂದು ವಿನಂತಿಸಿ ರೈಲ್ವೇ ಯಾತ್ರಿಕರ ಸಂಘದ ಅಧ್ಯಕ್ಷ ಆರ್‌. ಎಲ್ ಡಯಾಸ್‌, ಕಾರ್ಯದರ್ಶಿ ಮಂಜುನಾಥ್‌ ಮಣಿಪಾಲ, ಜೋನ್‌ ರೆಬೆÇÉೊ, ಸುಂದರ್‌ ಕೋಟಿಯಾನ್‌, ಸತೀಶ್‌ ಎನ್‌. ಅವರು ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರಿಗೆ ಮನವಿ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next