Advertisement
ಚಾಯ್‌ವಾಲಾನಿಂದ ಚೌಕೀದಾರ್2014ರಲ್ಲಿ ಮೋದಿ ಭ್ರಷ್ಟಾಚಾರದ ವಿರುದ್ಧ, ಬಡವರ ಪರವಾಗಿ ಸಾಕಷ್ಟು ಮಾತುಗಳನ್ನಾಡಿದ್ದರು. ಬಡವರ ಪರ ಎಂದು ಬಿಂಬಿಸಲು ಅವರು ಚಾಯ್‌ವಾಲಾ ಹೆಸರನ್ನು ಪರಿಣಾಮಕಾರಿಯಾಗಿ ಬಳಸಿದ್ದರು. ಈ ಬಾರಿ ರಕ್ಷಣೆ ವಿಚಾರದಲ್ಲಿ, ಭಯೋತ್ಪಾದನೆ, ಪಾಕಿಸ್ಥಾನ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿದ್ದೇವೆ ಎಂಬುದಕ್ಕೆ ಪೂರಕವಾಗಿ ಅತ್ಯುಗ್ರವಾಗಿ ಮಾತನಾಡಿದ್ದೂ ಅಲ್ಲದೇ ಭ್ರಷ್ಟಾಚಾರ, ರಕ್ಷಣೆ ವಿಚಾರದಲ್ಲಿ ಚೌಕೀದಾರ್ ಶಬ್ದವನ್ನು ಹೋದಲ್ಲೆಲ್ಲ ಪ್ರಸ್ತಾವಿಸಿದ್ದಾರೆ. ಉಗ್ರರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂಬ ಅವರ ಡೈಲಾಗ್ ಪ್ರಸಿದ್ಧವಾಗಿತ್ತು. ಒಂದು ಸಮೀಕ್ಷೆ ಪ್ರಕಾರ ಅವರು 109 ಬಾರಿ ಚೌಕೀದಾರ್ ಪದವನ್ನು ತಮ್ಮ ಚುನಾವಣ ಭಾಷಣಗಳಲ್ಲಿ ಬಳಸಿದ್ದಾರೆ. 2014ರಲ್ಲಿ ಅವರು ಬಡವರು/ಬಡತನ ಎಂಬುದನ್ನು 55 ಬಾರಿ ಪ್ರಯೋಗಿಸಿದ್ದರು.
2014ರ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಪ್ರಚಾರದಲ್ಲಿ ಹೆಚ್ಚು ಬಳಸಿದ್ದು ಅಭಿವೃದ್ಧಿ ವಿಚಾರಗಳನ್ನು. ಬಡವರ ಕಲ್ಯಾಣ, ಉದ್ಯೋಗ ನೀಡಿಕೆ, ಭ್ರಷ್ಟಾಚಾರ, ಬಡತನ ವಿಚಾರಗಳು ಅವರ ಮಾತುಗಳಲ್ಲಿ ಹೆಚ್ಚಾಗಿದ್ದವು. ಬಡವರು ಎಂಬ ಪದವನ್ನು ಅವರು 2014ರಲ್ಲಿ 55 ಬಾರಿ ಬಳಸಿದ್ದರೆ, 14 ಬಾರಿ ಉದ್ಯೋಗದ ಬಗ್ಗೆ, 19 ಬಾರಿ ಬಡತನದ ಬಗ್ಗೆ, 10 ಬಾರಿ ಯುಪಿಎ ಸರಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾವಿಸಿದ್ದರು. 2019ರಲ್ಲಿ ರಕ್ಷಣೆ ಬಗ್ಗೆ ಅತಿ ಹೆಚ್ಚು ಮೋದಿ ಪ್ರಸ್ತಾವಿಸಿದ್ದಾರೆ. ಬಾಲಾಕೋಟ್ ದಾಳಿ, ಸರ್ಜಿಕಲ್ ಸ್ಟ್ರೈಕ್‌ನ ವಿಚಾರ ಇದರಲ್ಲಿ ಪ್ರಮುಖ.