Advertisement

ರೈತ ವಿರೋಧಿ ಧೋರಣೆ ಕೈಬಿಡಲು ಆಗ್ರಹ

04:21 PM Sep 27, 2020 | Suhan S |

ಅಫಜಲಪುರ: ಹೊಸ ಭೂ ಸುಧಾರಣೆ ಕಾಯ್ದೆ ತಂದು ಉಳುಮೆಯ ಭೂಮಿ ಹಣವಂತರ ಪಾಲು ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಕೈ ಬಿಡದಿದ್ದರೆ ಸರ್ಕಾರಕ್ಕೆ ಗಂಡಾಂತರ ಕಾದಿದೆ ಎಂದು ಸಮಾಜ ಸೇವಕ ಜೆ.ಎಂ. ಕೊರಬು ಹೇಳಿದರು.

Advertisement

ಸರ್ಕಾರದ ರೈತ ವಿರೋಧಿ  ಕಾಯ್ದೆಗಳನ್ನು ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್‌ ಕಚೇರಿ ವರೆಗೆ ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಮಾತನಾಡಿದಅವರು, ಸಿಎಂ ಯಡಿಯೂರಪ್ಪ ಅಧಿಕಾರ ಸ್ವೀಕರಿಸುವಾಗ ರೈತರ ಹೆಸರಲ್ಲಿ  ಮಾಡಿದಂತೆ ರೈತರ ಪರವಾಗಿ ಸರ್ಕಾರ ನಡೆಸಬೇಕಾಗಿತ್ತು. ಆದರೆ ಅಧಿಕಾರ ವಹಿಸಿಕೊಂಡ ಬಳಿಕ ಕಾರ್ಪೊàರೇಟ್‌ ಕಂಪನಿಗಳು, ಉದ್ಯಮಿಗಳು, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ರೈತ ವಿರೋಧಿ  ಸರ್ಕಾರವಾಗಿದೆ ಎಂದು ದೂರಿದರು.

ಪ್ರಾಂತ ರೈತ ಸಂಘ ತಾಲೂಕಾಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿದರು. ಜೆ.ಎಂ ಕೊರಬು ಫೌಂಡೇಶನ್‌ ಅಧ್ಯಕ್ಷ ಶಿವಪುತ್ರ ಜಿಡ್ಡಗಿ, ರುದ್ರಯ್ಯ ಹಿರೇಮಠ, ರೇವಣಸಿದ್ದ ನಾಮಗೊಂಡ, ಬೀರಣ್ಣ ಕನಕಟೇಲ್‌, ಮಕೂºಲ್‌ ಶೇಕ್‌, ಪಂಡಿತ ನಾವಿ, ಅಡಿವೆಪ್ಪ ಮರಾಠ, ದೇವಪ್ಪ ಪೂಜಾರಿ, ಜೈಭೀಮ ಚಿಣಮಗೇರಿ, ರವಿ ಗೌರ, ಜಾವೇದ ಜಮಾದಾರ, ಗಡ್ಡೆಪ್ಪ ಮೇತ್ರಿ, ಆರ್‌.ಡಿ. ಪೂಜಾರಿ, ಮಾಣಿಕ ಮಾಸ್ತರ, ಕಬಿರದಾಸ ರಾಠೊಡ, ಮಹೇಶ, ಸಿದ್ದು, ಲಕ್ಕಪ್ಪ ಇದ್ದರು.

 

ನಾಳೆ ಯಡ್ರಾಮಿ ಬಂದ್‌ಗೆ ಕರೆ : ಯಡ್ರಾಮಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ರೈತ ವಿರೋಧಿ  ಕಾಯ್ದೆಗಳನ್ನು ಕೂಡಲೇ ಹಿಂಪಡೆಯುವಂತೆ ತಾಲೂಕು ಕರವೇ, ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಸೋಮವಾರ ಯಡ್ರಾಮಿ ಬಂದ್‌ ಕರೆ ನೀಡಿವೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ (ಪ್ರವೀಣಶೆಟ್ಟಿ ಬಣ)ದ ತಾಲೂಕಾಧ್ಯಕ್ಷ ವಿಶ್ವನಾಥ ಜಿ. ಪಾಟೀಲ, ಸೆ.28ರಂದು ರಾಜ್ಯವ್ಯಾಪಿ ವಿವಿಧ ಸಂಘಟನೆಗಳು ನೀಡಿರುವ ಬಂದ್‌ ಕರೆ ಹಿನ್ನೆಲೆಯಲ್ಲಿ ಯಡ್ರಾಮಿ ತಾಲೂಕಿನಲ್ಲಿಯೂ ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಯಡ್ರಾಮಿ ಬಂದ್‌ಗೆ ತಾಲೂಕು ದಲಿತ ಸೇನೆ, ಬಿಸಿಲು ನಾಡಿನ ಹಸಿರು ಸೇನೆ, ರಾಜ್ಯ ರೈತ ಸಂಘ, ವಾಹನ ಚಾಲಕರ ಸಂಘ, ಕರವೇ (ನಾರಾಯಣಗೌಡ ಬಣ) ಸೇರಿದಂತೆ 30ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next