ಮಂಡ್ಯ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಶನಿವಾರ ಬಂಧಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ (ಮೂಲ ಸಂಘಟನೆ) ಅಧ್ಯಕ್ಷ ಬೋರಾಪುರ ಶಂಕರೇ ಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್ ಗೌಡ, ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇ ಖರ್, ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಕಾರ್ಯ ದರ್ಶಿ ಕೆ.ರಾಮಲಿಂಗೇಗೌಡ, ಪ್ರಕಾಶ್, ಉಮೇಶ್, ಚಂದ್ರಶೇಖರ್, ರಮೇಶ, ಶಿವರು ದ್ರ, ಹೆಮ್ಮಿಗೆ ಚಂದ್ರಶೇಖರ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದರು.
ನಗರದ ಸರ್ ಎಂ.ವಿ. ಪ್ರತಿಮೆ ಮುಂಭಾಗ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ರಸ್ತೆ ತಡೆಯಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಎರಡೂ ಬದಿಯಲ್ಲೂ ವಾಹನಗಳ ದಟ್ಟಣೆ ಹೆಚ್ಚಾಯಿತು. ಪೊಲೀಸರು ಮನವೊಲಿಸಲು ಪ್ರಯತ್ನಿಸಿದಾರೂ, ವಿಫಲವಾ ಗಿತ್ತು. ಅಂತಿಮವಾಗಿ ಪೊಲೀಸರು ಪ್ರತಿಭಟ ನಾಕಾರರನ್ನು ಬಂಧಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೃಷಿ ಭೂಮಿ ಕಬಳಿಕೆ: 1961ರ ಭೂ ಸುಧಾರಣಾ ಕಾಯ್ದೆಯ 79 ಎಬಿಸಿ ಮತ್ತು 80ನೇ ಕಲಂಗಳನ್ನು ಪೂರ್ವಾನ್ವಯವಾಗುವಂತೆ ರದ್ದು ಪಡಿಸಿದೆ ಹಾಗೂ 62ನೇ ಕಲಂಗೆ ತಿದ್ದುಪಡಿ ತಂದಿದೆ. ಇದು ಭೂಸುಧಾರಣಾ ಕಾಯ್ದೆ ಅಲ್ಲ, ಭೂಕಬಳಿಕೆ 1961ರ ಕಾಯ್ದೆಯ 79ಎ ಮತ್ತು ಬಿ ಕಲಂಗಳು ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯವುಳ್ಳವರು ಹಾಗೂ ಕೈಗಾರಿ ಕೋದ್ಯಮಿಗಳು ಕೃಷಿ ಭೂಮಿ ಕಬಳಿಸದಂತೆ ರಕ್ಷಣೆ ಒದಗಿಸುತ್ತಿತ್ತು. 79 ಸಿ ಕಲಂ ತಾವು ನೈಜ ರೈತರೆಂದು ಸರಿ ಪ್ರಮಾಣ ಪತ್ರ ಒದಗಿಸದೇ ಜಮೀನನ್ನು ಕೊಂಡವರಿಗೆ ದಂಡ ವಿಧಿಸುವ ಅವಕಾಶ ಒದಗಿಸುತ್ತಿತ್ತು.
80ನೇ ಕಲಂ ರೈತರಲ್ಲ ದವರಿಗೆ ಕೃಷಿ ಭೂಮಿ ಮಾರುವುದನ್ನು ನಿಷೇಧಿಸಿತ್ತು. ಈ ಎಲ್ಲಾ ಕಲಂಗಳನ್ನು ರದ್ದು ಮಾಡಿ, ಕೃಷಿ ಭೂಮಿ ಸುಲಭವಾಗಿ ಲಾಭಕೋರರಿಗೆ ಬಂಡವಾಳಗಾರರಿಗೆ, ಕೈಗಾರಿಕೋದ್ಯಮಿಗಳು ಪಡೆದುಕೊಳ್ಳುವಂತೆ 63ನೇ ಕಲಂಗೂ ಮತ್ತು 80ನೇ ಕಲಂಗೂ ತಿದ್ದುಪಡಿ ತಂದಿದೆ. ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಈಗ ಬಲಾಡ್ಯರು ಮತ್ತು ಬಹುರಾಷ್ಟ್ರೀಯ ಕಂಪನಿ ಗಳು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸ ಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಆಹಾರ ಭದ್ರತೆಗೆ ಅಪಾಯ: ಈ ತಿದ್ದುಪಡಿ ಯು ನೇರವಾಗಿ ಆಹಾರ ಭದ್ರತೆ ಹಾಗೂ ಆಹಾರ ಸಾರ್ವಭೌಮತೆಯ ಒಟ್ಟಾರೆ ಕೃಷಿ ಕ್ಷೇತ್ರದ ಮೇಲೆ ಅಪಾಯ ತಂದೊಡ್ಡಲಿದ್ದು, ಶೇ.65ಭಾಗದ ಜನ ಕೃಷಿ ಕ್ಷೇತ್ರವನ್ನೇ ಜೀವನೋಪಾಯಕ್ಕಾಗಿ ಅವಲಂಭಿಸಿದ್ದಾರೆ. ಇದರಲ್ಲಿ ಶೇ. 80 ಭಾಗದ ಜನ ಸಣ್ಣ ಸಣ್ಣ ಹಿಡುವಳಿದಾರರು, ರಿಯಲ್ ಎಸ್ಟೇಟ್ ಹಾಗೂ ವಾಣಿಜ್ಯ ಕಾರಣದಿಂದ ಈ ಸಣ್ಣ ಹಿಡುವಳಿದಾರರು ಒಮ್ಮೆ ಲಾಭದಾಸೆಗೆ ಭೂಮಿ ಕಳೆದುಕೊಂಡರೆ ಮತ್ತೆ ಭೂಮಿ ಕೊಳ್ಳಲು ಸಾಧ್ಯವಿಲ್ಲ.
ಹೀಗಾಗಿ ಕೃಷಿ ಭೂಮಿಯ ಪ್ರಮಾಣ ಕಡಿಮೆ ಆಹಾರ ಭದ್ರತೆಗೆ ಅಪಾಯವಿದೆ. ಈ ಹಿನ್ನಲೆಯಲ್ಲಿ ತಿದ್ದುಪಡಿಯನ್ನು ಸರ್ಕಾರ ವಾಪಸ್ ಪಡೆಯ ಬೇಕು ಎಂದು ಒತ್ತಾಯಿಸಿದರು. ಸರ್ಕಾರ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದು, ಈ ಕಾಯ್ದೆಯು ಕೃಷಿ ಕಾರ್ಪೊರೇಟ್ ಕರಿಸಿ ಬಡ ರೈತರನ್ನು ಒಕ್ಕಲೆಬ್ಬಿಸುವ ನೀತಿಯ ಭಾಗವಾಗಿಯೇ ಇದ್ದು, ಈ ತಿದ್ದುಪಡಿಯನ್ನೂ ಕೈಬಿಡಬೇಕು ಎಂದು ಆಗ್ರಹಿಸಿದರು.