Advertisement

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ

08:52 AM Jun 17, 2020 | Suhan S |

ಬಳ್ಳಾರಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಎಸ್‌ ಯುಸಿಐ(ಕಮ್ಯುನಿಸ್ಟ್), ಆರ್‌ಕೆಎಸ್‌ ಜಿಲ್ಲಾ ಸಮಿತಿಗಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈತರು ತತ್ತರಿಸುತ್ತಿರುವಾಗ, ಅವರ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ರೈತರ ಭೂಮಿಯನ್ನೇ ಕಾರ್ಪೋರೇಟ್‌ ಕಂಪನಿಗಳ ಕಪಿಮುಷ್ಠಿಗೆ ಹಾಕುವಂಥ ಭೂ ಸುಧಾರಣೆ ಕಾಯ್ದೆಯ 79 ಎ, ಬಿ ಮತ್ತು ಸಿ, 80ನೇ ಕಲಮುಗಳನ್ನು ಪೂರ್ವನ್ವಯವಾಗುವಂತೆ ರದ್ದುಗೊಳಿಸಿರುವುದು ಅತ್ಯಂತ ಖಂಡನೀಯ. ರೈತ ವಿರೋಧಿ ನಡೆ. ಕೃಷಿಯೇತರ ಆದಾಯದಿಂದ ಕೃಷಿ ಭೂಮಿ ಕೊಳ್ಳಲು ನಿರ್ಬಂಧ ಹೇರಿದ್ದ ಮೇಲಿನ ಕಲಮುಗಳನ್ನು ರದ್ದುಗೊಳಿಸಿ, ಕಾರ್ಪೋರೇಟ್‌ ಕಂಪನಿಗಳಿಂದ ಶ್ರೀಮಂತರವರೆಗೆ ಯಾರೂ ಬೇಕಾದರೂ ಭೂಮಿಯನ್ನು ಕೊಳ್ಳಲು ಮುಕ್ತ ಪರವಾನಗಿ ನೀಡಿ, ರೈತರ ಹೆಸರಿನಲ್ಲಿ ಅಧಿಕಾರದ ಗದ್ದುಗೆಯೇರಿದ ರಾಜ್ಯ ಸರ್ಕಾರವು ರೈತರ ಬೆನ್ನಿಗೆ ಚೂರಿ ಹಾಕಿದೆ ಎಂದರು.

ಆರ್‌ಕೆಎಸ್‌ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ಕಾನೂನು ತಿದ್ದುಪಡಿಯಿಂದ ಮುಂದೆ ಬರುವ ದಿನಗಳಲ್ಲಿ ಕೋಟ್ಯಾಂತರ ರೈತರು ಬೀದಿ ಪಾಲಾಗುತ್ತಾರೆ. ಕೃಷಿ ಫಲವತ್ತಾದ ಭೂಮಿಯನ್ನು ಅನ್ಯ ಉದ್ಯಮಗಳಿಗೆ ನೀಡುತ್ತ ಹೋದಂತೆ ಕೃಷಿ ಉತ್ಪನ್ನಗಳನ್ನು ಬೆಳೆಯುವುದು ಕಡಿಮೆಯಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಎಸ್‌ ಯುಸಿಐ(ಸಿ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ. ಸೋಮಶೇಖರ್‌, ರಾಧಾಕೃಷ್ಣ, ಮಂಜುಳಾ, ದೇವದಾಸ್‌, ನಾಗಲಕ್ಷ್ಮೀ, ಡಾ| ಪ್ರಮೋದ್‌, ಶಾಂತಾ, ಗೋವಿಂದ್‌, ರೈತರಾದ ಪಂಪಾಪತಿ, ಬಸಣ್ಣ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next