Advertisement
ಈ ಮೊದಲೇ ಕೆಇಆರ್‌ಸಿಯು, ನೌಕರರ ಪಿಂಚಣಿ ಗ್ರಾಹಕರ ಮೇಲೆ ವರ್ಗಾಯಿಸಲು ಬರುವುದಿಲ್ಲ ಎಂದು ಹೇಳಿತ್ತು. ಆದರೂ ತೆರೆಮರೆಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ದಿಂದ ಪ್ರಯತ್ನಗಳು ಮುಂದುವರಿದಿದ್ದು, ಈಚೆಗೆ ನಡೆದ ಸಾರ್ವಜನಿಕ ವಿಚಾರಣೆಯಲ್ಲಿ ಪ್ರಸ್ತಾವಗೊಂಡಿದೆ.
Related Articles
Advertisement
ಆದರೆ, ಈ ವಿಷಯಕ್ಕೆ ಸಂಬಂಧಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫೆRಸಿಸಿಐ) ಹೈಕೋಟ್‌ನಿಂದ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಗೊಳಿಸುವಂತೆ ಸರಕಾರ ಹಾಗೂ ಕೆಪಿಟಸಿಎಲ್ ಕಸರತ್ತು ನಡೆಸಿದೆ. ಯಾಕೆಂದರೆ, ಇದು ತೆರವಾಗದೆ ಕೆಇಆರ್‌ಸಿ ಒಪ್ಪುವುದಿಲ್ಲ. ಇನ್ನು ಗ್ರಾಹಕರು ಪ್ರತಿ ವರ್ಷ ಸಿಬಂದಿ ವೆಚ್ಚವನ್ನು ಭರಿಸುತ್ತಿದ್ದಾರೆ.
ಸರಕಾರ-ಆಯೋಗದ ಹಗ್ಗ ಜಗ್ಗಾಟರಾಜ್ಯ ಸರಕಾರ 2022ರಿಂದ ಎಲ್ಲವನ್ನೂ ಗ್ರಾಹಕರಿಂದಲೇ ಸಂಗ್ರಹಿಸಲು ಆದೇಶಿಸಿದೆ. ಇದಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಲ್ಲ. ಸರಕಾರ ತನ್ನದೇ ಕಾಯ್ದೆಯ ನಿಯಮಗಳಂತೆ ಕೆಪಿಟಿಸಿಎಲ್ ನೌಕರರ ಪಿಂಚಿಣಿ ಸವಲತ್ತು ಭರಿಸಲು ಒಪ್ಪಿಕೊಂಡಿತ್ತು. ಈಗ ಅದನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಬರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಆದರೂ ಸರಕಾರ- ಕೆಇಆರ್‌ಸಿ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಪಿಂಚಣಿ ಭರಿಸಲು ಸಾಧ್ಯವಿಲ್ಲ
1999ರಲ್ಲಿ ಕೆಇಬಿ ಇದ್ದದ್ದು ಕೆಪಿಟಿಸಿಎಲ್ ಆಯಿತು. 2000ರಲ್ಲಿ ಸರಕಾರ – ಕೆಪಿಟಿಸಿಎಲ್- ನೌಕರರ ಸಂಘದ ನಡುವೆ ಒಪ್ಪಂದವಾಯಿತು. ಸರಕಾರ ನೌಕರರ ಪಿಂಚಣಿ ಹಣವನ್ನು ತಾನೇ ಪಾವತಿಸಲು ಒಪ್ಪಿತು. ನೌಕರರು ಆಗ ಎಸ್ಕಾಂಗಳ ರಚನೆಯನ್ನು ವಿರೋಧಿಸಿದ್ದರು. ಆಗ ಸರಕಾರ ಅವರ ಎಲ್ಲ ಸವಲತ್ತುಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ಅದರಂತೆ ಎಸ್ಕಾಂಗಳ ಎಲ್ಲ ಎಂಜಿನಿಯರ್‌ಗಳು ಕೆಪಿಟಿಸಿಎಲ್ ನೌಕರರಾಗಿಯೇ ಉಳಿದರು. ಈಗ ಸರಕಾರ ನೌಕರರ ಪಿಂಚಣಿ ಹಣವನ್ನು ಭರಿಸಲು ಸಾಧ್ಯವಿಲ್ಲ ಎನ್ನುತ್ತಿದೆ.