Advertisement

ವಿದ್ಯುತ್‌-ತೈಲ ಬೆಲೆ ಏರಿಕೆಗೆ ವಿರೋಧ

04:18 PM Jun 24, 2021 | Team Udayavani |

ಕಲಘಟಗಿ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೈಲ ಬೆಲೆ ಹಾಗೂ ವಿದ್ಯುತ್‌ ದರ ಏರಿಸುವ ಮೂಲಕ ಜನಸಾಮಾನ್ಯರ ಹಾಗೂ ಮಧ್ಯಮ ವರ್ಗದವರ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಆರೋಪಿಸಿದರು.

Advertisement

ಜೆಡಿಎಸ್‌ ತಾಲೂಕು ಘಟಕದ ನೇತೃತ್ವದಲ್ಲಿ ತೈಲ ಬೆಲೆ ಹಾಗೂ ವಿದ್ಯುತ್‌ ದರ ಏರಿಸಿರುವುದನ್ನು ಕಡಿತಗೊಳಿಸುವಂತೆ ಆಗ್ರಹಿಸಿ ಸಿಎಂಗೆ ಬರೆದ ಮನವಿಯನ್ನು ಬುಧವಾರ ಉಪತಹಶೀಲ್ದಾರ್‌ ಬಸವರಾಜ ಅಂಗಡಿ ಅವರಿಗೆ ಸಲ್ಲಿಸಿ ಮಾತನಾಡಿದರು.

ತೈಲ ಬೆಲೆ ಹೆಚ್ಚಳದಿಂದ ಸರಕು ಸಾಗಾಣಿಕೆ ದರ ಏರಿದ್ದು, ಶ್ರೀಸಾಮಾನ್ಯರು ಬಳಸುವ ಆಹಾರ ಸಾಮಗ್ರಿ, ಅಡುಗೆ ಎಣ್ಣೆ, ಬೇಳೆಕಾಳು, ತರಕಾರಿ ಮುಂತಾದ ಪದಾರ್ಥಗಳ ಬೆಲೆ ಗಗನ ಮುಟ್ಟಿದೆ. ವಿದ್ಯುತ್‌ ದರ ಏರಿಕೆಯ ಮೂಲಕ ಮಧ್ಯಮ ವರ್ಗದವರಿಗೆ ಶಾಕ್‌ ನೀಡಿದೆ. ರೈತರು ಬೆಳೆದ ಫಸಲು ಮಾರಾಟವಾಗದೇ ಹೊಲದಲ್ಲಿಯೇ ಹಾಳಾಗಿದೆ ಎಂದು ಆರೋಪಿಸಿದರು. ಸರಕಾರ ಮನವಿಗೆ ಸ್ಪಂದಿಸದಿದ್ದಲ್ಲಿ ಪಕ್ಷದ ಕಾರ್ಯಕರ್ತರು ಹೋಬಳಿ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಸರಕಾರಿ ಕಚೇರಿಗಳ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಶೀಗಿಗಟ್ಟಿ, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಹನಮಂತಪ್ಪ ಕಲ್ಲವಡ್ಡರ, ಶೇಕಣ್ಣ ಅಂಗಡಿ, ಸಹದೇವ ಹುರಕಡ್ಲಿ, ಬಸವರಾಜ ಅಲ್ಲಾಪೂರ, ಅಲ್ಲಿಸಾಬ ವಾಲಿಕಾರ, ಬಸವರಾಜ ಮುದಿಗೌಡ್ರ, ಚನ್ನಪ್ಪ ಗಾಣಿಗೇರ, ಶಿವಾನಂದ ಅತ್ತಿಮರದ, ಬಸಪ್ಪ ಗಾಣಿಗೇರ, ನಿಂಗಪ್ಪ ತಳವಾರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next