ಅರಸೀಕೆರೆ: ನಗರದ ಸಂತೆ ಮೈದಾನ ದಲ್ಲಿ ಹೈಟೆಕ್ ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿ ರುವ ಕಾರಣ ಸಂತೆ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪರ್ಯಾಯ ಜಾಗದ ವ್ಯವಸ್ಥೆಯನ್ನು ನಗರಸಭೆ ಆಡಳಿತ ಕಲ್ಪಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಎ.ಜಿ. ಯೋಗೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸಂತೆ ಮೈದಾನದಲ್ಲಿ ಎ.ಜಿ. ಯೋಗೀಶ್ ನೇತೃತ್ವದಲ್ಲಿ ಗುಂಪು ಸೇರಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಹಾಗೂ ನಗರಸಭೆ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಾಯಿನಾಥ ರಸ್ತೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯ ಪಿ.ಪಿ.ವೃತ್ತಕ್ಕೆ ಬಂದು ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ವೇಳೆ ಎ.ಜಿ.ಯೋಗೀಶ್ ಮಾತ ನಾಡಿ, ಅನೇಕ ವರ್ಷಗಳಿಂದ ಸಂತೆ ವ್ಯಾಪಾರಿ ಮಾಡಿಕೊಂಡು ಜೀವನ ನಡೆ ಸುತ್ತಿದ್ದ ವ್ಯಾಪಾರಿಗಳ ವಿರೋಧದ ನಡುವೆಯೂ ನಗರದ ಸಂತೆ ಮೈದಾನ ದಲ್ಲಿ ನೂತನ ಹೈಟೆಕ್ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ನಗರ ಸಭೆ ಆಡಳಿತ ಮುಂದಾಗಿದೆ. ಜೂ.21 ರಂದು ತಾವು ಸಂತೆ ವ್ಯಾಪಾರಿ ಗಳೊಂದಿಗೆ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ನಡೆಸಿ ನಗರಸಭೆ ಆಡಳಿತಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ದ್ದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿ ಯಾರಿಗೂ ಅನ್ಯಾಯ ಉಂಟಾಗದಂತೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂತೆ ವ್ಯಾಪಾರಿ ಗಳಾದ ಕಿರಣ್‌ಕುಮಾರ್, ಕೊಟ್ರೇಶ್, ಪುಟ್ಟಸ್ವಾಮಿ, ತಿಪ್ಪೇಶ್, ಕೃಷ್ಣ, ನಾಗ ರಾಜ್, ಮುಬಾರಕ್, ಶಾಂತಮ್ಮ, ರೇಣುಕಮ್ಮ, ಶಾರದಮ್ಮ, ನಂಜಮ್ಮ, ಸಾವಿತ್ರಮ್ಮ, ನಾಗಮ್ಮ ಇತರರಿದ್ದರು.