Advertisement

ಮಂಕಿಯಲ್ಲಿ ಕೋವಿಡ್‌ ಆಸ್ಪತ್ರೆಗೆ ವಿರೋಧ

01:28 PM Jul 12, 2020 | Suhan S |

ಹೊನ್ನಾವರ: ತಾಲೂಕಿನ ಕೋವಿಡ್ ಪೀಡಿತರನ್ನು ಮಂಕಿ ಗ್ರಾಮದ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿರುವ ನೆರೆಸಂತ್ರಸ್ತರ ಕಟ್ಟಡದಲ್ಲಿ ಚಿಕಿತ್ಸೆ ನಿಡುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.

Advertisement

ಈ ಪ್ರದೇಶದಲ್ಲಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಪದವಿ ಕಾಲೇಜು, ಕಂದಾಯ ಇಲಾಖೆ, ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಜನತಾ ಕಾಲೋನಿಯಿದೆ. ಸರಿಸುಮಾರು ಮಂಕಿ ಗ್ರಾಮದ 4 ಪಂಚಾಯತಿಯ ಜನರು ತಮ್ಮ ದಿನನಿತ್ಯ ವ್ಯವಹಾರಕ್ಕಾಗಿ ಈ ಪ್ರದೇಶದಲ್ಲಿ ಭೇಟಿ ನೀಡುತ್ತಿರುತ್ತಾರೆ. ಒಂದು ವೇಳೆ ಈ ಪ್ರದೇಶದಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಸಮುದಾಯಗಳಿಗೆ ಹರಡುವ ಸಂಭವ ಹೆಚ್ಚಾಗಿರುತ್ತದೆ. ಅಲ್ಲದೇ ಗ್ರಾಮದಲ್ಲಿ ಅಂದಾಜು 30 ಸಾವಿರ ಜನಸಂಖ್ಯೆಯಿದ್ದು, ಈ ಕಟ್ಟಡದಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲು ಯಾವುದೇ ವ್ಯವಸ್ಥೆ ಇಲ್ಲದಿರುವ ಕಾರಣ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ತಾಲೂಕು ಕೇಂದ್ರದಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು. ಕೂಡಲೇ ಮಂಕಿಯಲ್ಲಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುವ ನಿರ್ಣಯ ಕೈ ಬಿಡಬೇಕು ಎಂದು ಮಂಕಿ ಪ್ರಾಥಮಿಕ ಆರೋಗ್ಯಾಧಿಕಾರಿಗಳಾದ ದಿನೇಶ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರಾಜು ನಾಯ್ಕ ಮಂಕಿ, ರಿಕ್ಷಾ ಮಾಲಕ-ಚಾಲಕ ಸಂಘದ ಅಧ್ಯಕ್ಷ ಭಾಸ್ಕರ್‌ ನಾಯಕ, ಯಕ್ಷ ಬಳಗದ ಅಧ್ಯಕ್ಷ ಸರಶು ನಾಯ್ಕ, ಸ್ವಸಹಾಯ ಸಂಘದ ಅಧ್ಯಕ್ಷ ಜಾಕೀರ್‌ ಸಾಬ್‌, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next