Advertisement

ಕ್ಷೇತ್ರ ಪುನರ್‌ವಿಂಗಡನೆಗೂ ವಿರೋಧ- ಒಂದು ದೇಶ ಒಂದು ಚುನಾವಣೆ ವಿರುದ್ಧ ತ.ನಾ ನಿರ್ಣಯ

12:19 AM Feb 15, 2024 | Team Udayavani |

ಚೆನ್ನೈ: ಕೇಂದ್ರಕ್ಕೆ ಸವಾಲೆಸೆದಿರುವ ತಮಿಳುನಾಡುವ ಸರಕಾರ‌, ‘ಒಂದು ದೇಶ, ಒಂದು ಮತದಾನ’ ನೀತಿಯನ್ನು ಜಾರಿಗೊಳಿಸಬಾರದು. 2026ರ ನಂತರ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳ ವಿಂಗಡಣೆ ಮಾಡಬಾರದು ಎಂಬ ಎರಡು ಪ್ರಮುಖ ನಿರ್ಣಯಗಳನ್ನು ವಿಧಾನ ಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಿದೆ.

Advertisement

ಕೇಂದ್ರದ “ಒಂದು ದೇಶ, ಒಂದು ಚುನಾವಣೆ” ಪ್ರಜಾಪ್ರಭುತ್ವಕ್ಕೆ ವಿರೋಧಿ ಕ್ರಮ ಎಂದು ಎಂದು ಸಿಎಂ ಸ್ಟಾಲಿನ್‌ ಆರೋಪಿಸಿದ್ದಾರೆ. ಪರಿಣಾಮಕಾರಿಯಾಗಿ ಜನಸಂಖ್ಯೆ ನಿಯಂತ್ರಿಸುತ್ತಿರುವ ತಮಿಳುನಾಡಿನಂಥ ರಾಜ್ಯಗಳಿಗೆ ದಂಡ ವಿಧಿಸಬಾರದು ಎಂದು ಒತ್ತಾಯಿಸಿದ್ದಾರೆ.

ಇದರ ಜತೆಗೆ ಜನಗಣತಿಯ ಬಳಿಕ ನಡೆಯಲಿರುವ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ತಮಿಳುನಾಡಿನಲ್ಲಿ ಸದ್ಯ ಇರುವ 39 ಕ್ಷೇತ್ರಗಳ ಬದಲಿಗೆ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಕೇಂದ್ರ ಸರಕಾರ‌ ಕೈಗೊಳ್ಳಲಿರುವ ತೀರ್ಮಾನಕ್ಕೆ ತಮಿಳು ನಾಡು ವಿಧಾನಸಭೆ ಒಕ್ಕೊರಲಿನಿಂದ ಖಂಡಿಸುತ್ತದೆ ಎಂದು ಸಿಎಂ ಸ್ಟಾಲಿನ್‌ ಘೋಷಿಸಿದ್ದಾರೆ.

ಈ ನಿರ್ಣಯವನ್ನು ಡಿಎಂಕೆಯ ಮಿತ್ರಪಕ್ಷಗಳಾದ ಕಾಂಗ್ರೆಸ್‌, ವಿಸಿಕೆ, ಎಂಡಿಎಂಕೆ ಮತ್ತು ಇತರ ಎಡಪಕ್ಷಗಳು ಬೆಂಬಲಿಸಿದ್ದು ಕಂಡುಬಂತು. ಆದರೆ ಈ ವೇಳೆ ಪಿಎಂಕೆ ಪಕ್ಷದ ಶಾಸಕರು ಇರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next