Advertisement

ಆನೆ ನಿಷೇಧಿಸಿದ್ದಕ್ಕೆ ವಿರೋಧ

12:31 AM May 10, 2019 | mahesh |

ತಿರುವನಂತಪುರ: ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವನ್ನು ಹೊಂದಿರುವ ಕೇರಳದಲ್ಲಿ ಈಗ ಶಬರಿಮಲೆಯಂಥದ್ದೇ ಇನ್ನೊಂದು ವಿವಾದ ಹುಟ್ಟಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ಅತ್ಯಂತ ಜನಪ್ರಿಯ ಪೂರಂ ಹಬ್ಬದಲ್ಲಿ ವೃದ್ಧ ಆನೆ ತೆಚ್ಚಿಕೊಟ್ಟುಕಾವು ರಾಮಚಂದ್ರನ್‌ ಭಾಗವಹಿಸ ದಂತೆ ಸ್ಥಳೀಯ ಆಡಳಿತ ನಿಷೇಧ ಹೇರಿರುವುದು ಈಗ ದೊಡ್ಡ ವಿವಾದವಾಗಿದೆ. 54 ವರ್ಷದ ಈ ಆನೆ ದಶಕಗಳಿಂದಲೂ ಪೂರಂ ಹಬ್ಬದ ಸೆಲೆಬ್ರಿಟಿ! ಈ ಆನೆಯನ್ನು ಕಣ್ತುಂಬಿಕೊಳ್ಳಲೆಂದೇ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ಕಳೆದ ಫೆಬ್ರವರಿಯಲ್ಲಿ ರಾಮಚಂದ್ರನ್‌ ಮಾಡಿದ ಒಂದು ಅನಾಹುತವೇ ಈಗ ಆತನಿಗೆ ನಿಷೇಧ ಹೇರುವಂತೆ ಮಾಡಿದೆ. ಒಕ್ಕಣ್ಣ ರಾಮಚಂದ್ರನ್‌ ಕಳೆದ ಫೆಬ್ರವರಿಯಲ್ಲಿ ಸಿಟ್ಟಿಗೆದ್ದು ಇಬ್ಬರನ್ನು ಸಾಯಿಸಿದ್ದ. ಹೀಗಾಗಿ ಭದ್ರತೆ ಕಾರಣಗಳಿಗೆ ಆನೆಯನ್ನು ಬಳಸದಂತೆ ಆಡಳಿತ ಮಂಡಳಿ ಸೂಚಿಸಿದೆ.

Advertisement

ಆದರೆ ರಾಮಚಂದ್ರನ್‌ ಮೇಲೆ ನಂಬಿಕೆಯಿಟ್ಟಿರುವ ಭಕ್ತರಿಗೆ ಇದು ಸಿಟ್ಟು ತರಿಸಿದೆ. ಕೇರಳ ಆನೆ ಮಾಲೀಕರ ಸಂಘಟನೆ ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬಲಪಂಥದ ಸಂಘಟನೆಗಳು ಬೆಂಬಲ ಸೂಚಿಸಿವೆ. ಯಾವ ಆನೆಯನ್ನೂ ಯಾವ ಉತ್ಸವದಲ್ಲೂ ಭಾಗವಹಿಸಲು ಒದಗಿಸುವುದಿಲ್ಲ ಎಂದು ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಮೇ 11ರಿಂದಲೇ ಆನೆಗಳನ್ನು ಉತ್ಸವಕ್ಕೆ ಕೊಡುವುದಿಲ್ಲ ಎಂದಿವೆ. ಮೇ11ರ ನಂತರ ಕೇರಳದಾದ್ಯಂತ ಹಲವು ಉತ್ಸವಗಳು ನಡೆಯಲಿದ್ದು, ವಿವಾದ ಇನ್ನಷ್ಟು ಗಂಭೀರ ಸ್ವರೂಪ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next