Advertisement

ಗ್ರಾಪಂ ಆಡಳಿತ ಸಮಿತಿ ನೇಮಕಕ್ಕೆ ವಿರೋಧ

05:44 AM Jun 01, 2020 | Team Udayavani |

ಯಳಂದೂರು: ಗ್ರಾಮ ಪಂಚಾಯಿತಿಗೆ ಆಡಳಿತ ಸಮಿತಿ ನೇಮಿಸುವುದಕ್ಕೆ ನನ್ನ ವಿರೋಧವಿದೆ ಎಂದು ಶಾಸಕ ಮಹೇಶ್‌ ತಿಳಿಸಿದರು. ತಾಲೂಕಿನ ಯರಗಂಬಳ್ಳಿಯಲ್ಲಿ ಭಾರತ್‌ ನಿರ್ಮಾಣ್‌ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಪಂ ಸದಸ್ಯರ ಅವಧಿ  ಮುಕ್ತಾಯಗೊಳ್ಳುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಚುನಾವಣೆಗಳು ಮುಂದೂಡಲ್ಪಟ್ಟಿದೆ.

Advertisement

ಈ ಹಿನ್ನೆಲೆಯಲ್ಲಿ  ಆಡಳಿತ ಸಮಿತಿ ರಚಿಸುವ ಬಗ್ಗೆ ಕೇಳುತ್ತಿದೆ. ಇದಕ್ಕೆ ನನ್ನ ಸಂಪೂರ್ಣ  ವಿರೋಧವಿದೆ. ಇದರ ಬದಲು ಆಡಳಿತಾಧಿ ಕಾರಿಗಳನ್ನು ನೇಮಿಸುವಂತೆ ಇಲ್ಲವೆ ಹಾಲಿ ಇರುವ ಸದಸ್ಯರನ್ನೇ ಆಡಳಿತ ಸಮಿತಿಯನ್ನಾಗಿ ನೇಮಿಸುವಂತೆ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆ. ಖುದ್ದು ಈ ಬಗ್ಗೆ ನಾನೇ ಮಾತನಾಡಿದ್ದೇನೆ ಎಂದರು.

ನರೇಗಾದಿಂದ ಅನುಕೂಲ: ನನ್ನ ಕ್ಷೇತ್ರದಲ್ಲಿ 15 ಸಾವಿರ ಜನರು ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯೋಜನೆಯಡಿ ತಾಲೂಕಿನಲ್ಲಿ 84 ಕೆರೆಗಳ ಅಭಿವೃದಿ, 6 ಕಡೆ ರಾಜೀವ್‌ ಗಾಂಧಿ ಸೇವಾ ಕೇಂದ್ರಗಳ ನಿರ್ಮಾಣ, 275  ದನದ ಕೊಟ್ಟಿಗೆಗಳ ನಿರ್ಮಾಣ, 22 ಚೆಕ್‌ ಡ್ಯಾಂ, 405 ತೆಂಗಿನ ತೋಟ ಅಭಿವೃದಿಟಛಿ, 6 ಸಮುದಾಯ ಶೌಚಗೃಹಗಳ ನಿರ್ಮಾಣ, 171 ಕಿ.ಮೀ. ನಮ್ಮ ಹೊಲ, ನಮ್ಮ ರಸ್ತೆ ನಿರ್ಮಾಣ, 74 ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗಿದೆ  ಎಂದರು.

ಜಿಪಂ ಸದಸ್ಯ ಯೋಗೇಶ್‌ ತಾಪಂ ಪ್ರಭಾರ ಅಧ್ಯಕ್ಷೆ ಭಾಗ್ಯ ಸದಸ್ಯರಾದ ವೆಂಕಟೇಶ್‌, ಪದ್ಮಾವತಿ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ, ಉಪಾಧ್ಯಕ್ಷ ಸಿದ್ದರಾಜು, ಸದಸ್ಯ ರಾದ ನಾಗರಾಜು, ಲೀಲಾವತಿ, ತಮ್ಮಣ್ಣ, ಉಷಾ, ರೂಪಶ್ರೀ,  ಪುಟ್ಟತಾಯಮ್ಮ, ನಂಜುಂಡಸ್ವಾಮಿ, ಶಿವಮ್ಮ, ಪದ್ಮಾವತಿ, ಮಂಜುನಾಥ್‌, ಮಂಜುಳಾ ಪಿಡಿಒ ವೆಂಕ ಟಾಚಲಮೂರ್ತಿ, ಇಒ ರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next