Advertisement

ಹೈಕೋರ್ಟ್‌ಗಳಲ್ಲಿ ವಾಣಿಜ್ಯ ವಿಶೇಷ ಪೀಠಕ್ಕೆ ಆಕ್ಷೇಪ

06:35 AM Aug 02, 2018 | Team Udayavani |

ನವದೆಹಲಿ: ವಾಣಿಜ್ಯ ವಿವಾದಗಳನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ವಿಶೇಷ ಕೋರ್ಟ್‌ಗಳ ಸ್ಥಾಪನೆ ನಿಟ್ಟಿನಲ್ಲಿ ಮಂಡಿಸಲಾಗಿರುವ ವಾಣಿಜ್ಯ ಕೋರ್ಟ್‌ಗಳು, ವಾಣಿಜ್ಯ ವಿಭಾಗ ಮತ್ತು ಹೈಕೋರ್ಟ್‌ಗಳಲ್ಲಿ ವಾಣಿಜ್ಯ ವ್ಯಾಜ್ಯ ಮೇಲ್ಮನವಿ ವಿಭಾಗ (ತಿದ್ದುಪಡಿ) ಕಾಯ್ದೆ 2018ಕ್ಕೆ ಬುಧವಾರ ಲೋಕ ಸಭೆ ಅಂಗೀಕಾರ ನೀಡಿದೆ.

Advertisement

ಈ ಸಂದರ್ಭದಲ್ಲಿ ತುಮಕೂರಿನ ಕಾಂಗ್ರೆಸ್‌ ಸಂಸದ ಎಸ್‌.ಪಿ.ಮುದ್ದಹನುಮೇ ಗೌಡ ವಿಧೇಯಕದ ವಿರುದಟಛಿ ಮಾತನಾಡಿದರು. ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಇಂಥ ಕಾಯ್ದೆ ಜಾರಿಗೆ ತರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದರ ಜತೆಗೆ ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಶೇ.50ರಷ್ಟು ಹುದ್ದೆಗಳು ಭರ್ತಿಯಾಗಿಲ್ಲ.ಹೀಗಾಗಿ, ಹೈಕೋರ್ಟ್‌ಗಳಿಗೆ ವಾಣಿಜ್ಯ ವಿವಾದ ಬಗೆಹರಿಸುವುದು ಹೊರೆಯಾಲಿದೆ ಎಂದರು.

ವಿಧೇಯಕವನ್ನು ಸಮರ್ಥಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ದೇಶದಲ್ಲಿ ಉತ್ತಮ ಉದ್ದಿಮೆ, ವ್ಯವಹಾರ ನಡೆಸುವ ವಾತಾವರಣ ಇದೆ ಎಂಬ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ವಿಧೇಯಕದ ಅಂಗೀಕಾರ ಮಹತ್ವ ಪಡೆದಿದೆ ಎಂದು ಹೇಳಿದ್ದಾರೆ.

ದೇಶದ ನ್ಯಾಯಾಲಯಗಳಲ್ಲಿ ಹೆಚ್ಚಿನ ಹುದ್ದೆಗಳು ಭರ್ತಿಯಾಗಿಲ್ಲ ಎಂಬ ಪ್ರತಿಪಕ್ಷಗಳ ಮಾತಿಗೆ ಪ್ರತಿಕ್ರಿಯೆ ಕೊಟ್ಟ ಕಾನೂನು ಸಚಿವರು,ಸದ್ಯ 18.446 ಜಡ್ಜ್ಗಳ ಹುದ್ದೆಗಳು ಕೆಳ ಹಂತದ ಕೋರ್ಟ್‌ಗಳಲ್ಲಿದ್ದಾರೆ. 173 ಹೊಸ ಜಡ್ಜ್ಗಳ ಹುದ್ದೆಗಳನ್ನು ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಸೃಷ್ಟಿಸಲಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರಗಳು ಕೂಡ ಜಿಲ್ಲಾ ಮಟ್ಟದಲ್ಲಿ ವಾಣಿಜ್ಯ ವ್ಯಾಜ್ಯ ಪರಿಹಾರ ಕೋರ್ಟ್‌ಗಳನ್ನು ಸ್ಥಾಪಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next